ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ : ರೇಣುಕಾಚಾರ್ಯ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

renukachrya

ತುರುವೇಕೆರೆ, ಡಿ.16- ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಶೀಘ್ರವೇ ಅಂತ್ಯಗೊಳ್ಳಲಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ತಾಲೂಕಿನ ಬೀಕರ ಬರಗಾಲದ ಹಿನ್ನಲೆಯಲ್ಲಿ ತಾಲೂಕಿಗೆ ಆಗಮಿಸಿ ಬರ ವಿಕ್ಷಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 139 ತಾಲೂಕುಗಳು ಬರಗಾಲವೆಂದು ಘೋಷಿಸಿರುವ ರಾಜ್ಯ ಸರ್ಕಾರ ಬರವನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ರೈತರಿಗೆ ಪ್ರಯೋಜನಕಾರಿ ಯೋಜನೆಗಳನ್ನು ನೀಡುವಲ್ಲಿ ವಿಪಲವಾಗಿದೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಕೇಂದ್ರ ಹಣವನ್ನು ಸದ್ಬಳಕೆ ಮಾಡುವಲ್ಲಿ ವಿಫಲ:

ಪ್ರದಾನಮಂತ್ರಿ ನರೇಂದ್ರ ಮೋದಿವರನ್ನು ಟೀಕೆ ಮಾಡುವ ಮುಖ್ಯಮಂತ್ರಿಗಳು ಕೇಂದ್ರ ನೀಡಿದ ಬರ ಪರಿಹಾರಕ್ಕೆ ನೀಡಿದ ಮೊದಲ ಕಂತು 1540 ಕೋಟಿ ಹಾಗೂ 2 ನೇ ಕಂತು 2270 ಕೋಟಿ ಹಣವನ್ನು ಸದ್ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್, ತಾಲೂಕು ಅಧ್ಯಕ್ಷ ಮಸಾಲ ಜಯರಾಮ್, ರೈತ ಮೋರ್ಚ ಜಿಲ್ಲಾಧ್ಯಕ್ಷ ನಂದೀಶ್, ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ಬ್ಯಾಟರಂಗೇಗೌಡ, ಬಿಜೆಪಿ ಕಾರ್ಯದರ್ಶಿ ಹೆಬ್ಬಾಕರವಿ, ವಿಜಯಕುಮಾರ್, ರುದ್ರೇಶ್, ತಾಲೂಕು ರೈತ ಮೋರ್ಚ ಅಧ್ಯಕ್ಷ ಅಬಲಕಟ್ಟೆ ರಾಮಣ್ಣ, ಅರಳಿಕೆರೆ ಶಿವಯ್ಯ ಮತ್ತಿತರರಿದ್ದರು.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin