ಶುಕ್ರ ಗ್ರಹದ ಮೇಲೆ ಇಸ್ರೋ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

Isro-Venus

ಬೆಂಗಳೂರು/ನವದೆಹಲಿ, ಏ.22-ಏಕಕಾಲದಲ್ಲಿ 104 ಉಪಗ್ರಹಗಳನ್ನು ನಭಕ್ಕೆ ಉಡ್ಡಯನ ಮಾಡಿ, ಕೆಂಪು ಗ್ರಹಕ್ಕೆ ಮಂಗಳಯಾನ ಕೈಗೊಂಡು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ), ಮತ್ತೊಂದು ವಿಶ್ವವಿಕ್ರಮಕ್ಕೆ ಸಜ್ಜಾಗಿದೆ. ಈ ಬಾರಿ ಇಸ್ರೋ ಕಣ್ಣು ಸೌರಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರ ಗ್ರಹದ ಮೇಲೆ ನೆಟ್ಟಿದೆ.   ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿರುವ ಇಸ್ರೋ, ಈಗ ಜಗತ್ತಿನ ಬಾಹ್ಯಾಕಾಶ ಸಂಶೋಧನ ಕ್ಷೇತ್ರದ ದಿಗ್ಗಜ ಸಂಸ್ಥೆಯಾಗಿದೆ. ಇದೇ ಕಾರಣಕ್ಕಾಗಿ ಶುಕ್ರಯಾನದ ಮಹತ್ವದ ಯೋಜನೆ ಕೈಗೊಳ್ಳಲು ಇಸ್ರೋಗೆ ನೇತೃತ್ವ ವಹಿಸುವ ಮಹತ್ವಾಕಾಂಕ್ಷಿ ಯೋಜನೆಗೆ ವಿಶ್ವದ ಮುಂಚೂಣಿ ದೇಶಗಳು ಮುಂದೆ ಬಂದಿವೆ. ಶುಕ್ರಯಾನವು ಬಹು ಶತಕೋಟಿ ಡಾಲರ್ ಯೋಜನೆಯಾಗಿದ್ದು, 2020ರಲ್ಲಿ ಸಾಕಾರಗೊಳ್ಳುವ ನಿರೀಕ್ಷೆ ಇದೆ.

ಮಂಗಳಯಾನದಂತೆಯೇ ಈ ಯೋಜನೆಯನ್ನು ಯಶಸ್ವಿಗೊಳಿಸಲು ಇಸ್ರೋ ಸಜ್ಜಾಗಿದ್ದು, ಪ್ರಮುಖ ರಾಷ್ಟ್ರಗಳು ಸಹಕಾರ ನೀಡಲಿವೆ. ಶುಕ್ರ (ವೀನಸ್) ಗ್ರಹದ ಸುತ್ತ 500×60,000 ಕಿ.ಮೀ. ಕಕ್ಷೆಯ ಪ್ರದಕ್ಷಿಣೆ ಹಾಕುವ ಅಂತರಿಕ್ಷ ಯಾನ ಇದಾಗಿದ್ದು, ಹಲವಾರು ತಿಂಗಳು ಬೇಕಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin