ಶೂಟೌಟ್ ಪ್ರಕರಣ : ಐಸಿಯುನಲ್ಲಿ ಕಡಬಗೆರೆ ಶ್ರೀನಿವಾಸ್, ನೆಲಮಂಗಲ ರೌಡಿಗಳ ಪರೇಡ್

ಈ ಸುದ್ದಿಯನ್ನು ಶೇರ್ ಮಾಡಿ

kadabagere

ಬೆಂಗಳೂರು, ಫೆ.4-ಶೂಟೌಟ್ ಪ್ರಕರಣದಲ್ಲಿ ಗಾಯಗೊಂಡಿರುವ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಅವರ ಭುಜ, ಹೊಟ್ಟೆ ಹೊಕ್ಕಿದ್ದ ಮೂರು ಗುಂಡುಗಳನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

15ಕ್ಕೂ ಹೆಚ್ಚು ಶಂಕಿತರು ವಶಕ್ಕೆ:

ಶೂಟೌಟ್ ಪ್ರಕರಣಕ್ಕೆ ಸಂಬಸಿದಂತೆ 15ಕ್ಕೂ ಹೆಚ್ಚು ಶಂಕಿತ ಆರೋಪಿಗಳನ್ನು ತನಿಖಾ ತಂಡದ  ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.  ಹಳೇದ್ವೇಷದಲ್ಲಿ ವಿರೋ ಗುಂಪು ಕೃತ್ಯ ಎಸಗಿರುವ ಶಂಕೆಯಿದ್ದು, ಆ ನಿಟ್ಟಿ ನಲ್ಲಿ  ಪೊಲೀಸರು ತನಿಖೆ ಕೈಗೊಂಡಿದ್ದಾರೆ.  ಬೆಂಗಳೂರು ಗ್ರಾಮಾಂತರ ಭಾಗದ ಬಾಗಲೂರು, ನೆಲಮಂಗಲ, ಸುಂಕದಕಟ್ಟೆ, ರಾಜಾನುಕುಂಟೆ ಸೇರಿದಂತೆ ವಿವಿಧೆಡೆಗಳಿಂದ ಶಂಕಿತ ರೌಡಿಗಳನ್ನು  ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಭೂಗತ ನಂಟು ಶಂಕೆಯಲ್ಲಿ ಭೂಗತ ಪಾತಕಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನೆಲಮಂಗಲ ರೌಡಿಗಳ ಪರೇಡ್ : 

ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣ ಹಿನ್ನೆಲೆಯಲ್ಲಿ ಇಂದು ನೆಲಮಂಗಲ ಗ್ರಾಮಾಂತರ ಠಾಣೆ ಆವರಣದಲ್ಲಿ ರೌಡಿಗಳ ಪರೇಡ್ ನಡೆಯಿತು.  ಕೇಂದ್ರ ವಲಯ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಎಸ್‍ಪಿ ಅಮಿತ್‍ಸಿಂಗ್ ಅವರ ಮಾರ್ಗದರ್ಶನದಲ್ಲಿ ನೆಲಮಂಗಲ ವಿಭಾಗದ ರೌಡಿಗಳ ಪರೇಡ್ ನಡೆಸಲಾಗಿದೆ.  ಪರೇಡ್‍ನಲ್ಲಿ ಮಾದನಾಯಕನಹಳ್ಳಿ-72, ದಾಬಸ್‍ಪೇಟೆ-28, ತ್ಯಾಮಗೊಂಡ್ಲು-16, ನೆಲಮಂಗಲ ಗ್ರಾಮಾಂತರ-28, ನೆಲಮಂಗಲ ಪಟ್ಟಣದ-75 ರೌಡಿಶೀಟರ್‍ಗಳು ಭಾಗಿಯಾಗಿದ್ದರು.  ರೌಡಿಶೀಟರ್‍ಗಳ ಹಿನ್ನೆಲೆ ವಿವರಗಳನ್ನು ಪಡೆದುಕೊಂಡ ಎಸ್‍ಪಿ ಅಮಿತ್‍ಸಿಂಗ್ ಅವರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದರು ಎಂದು  ಪೊಲೀಸ್ ಮೂಲಗಳು ತಿಳಿಸಿವೆ.  ಎಎಸ್‍ಪಿ ಚಂದ್ರಕಾಂತ್, ಸಿಪಿಐಗಳಾದ ನಾಗರಾಜ್, ನಾಗೇಶ್, ಪಿಎಸ್‍ಐಗಳಾದ ನವೀನ್‍ಕುಮಾರ್, ರಾಘವೇಂದ್ರ ಈ ವೇಳೆ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin