ಶೇಂಗಾ ಬೀಜ ನುಂಗಿದ್ದ ಮಗು ಉಸಿರುಗಟ್ಟಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Groundnut

ಚಿತ್ರದುರ್ಗ, ಆ.30-ಕಡಲೇಬೀಜ ನುಂಗಿದ ಬಾಲಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಕ್ಕೆರೆ ಗ್ರಾಮದಲ್ಲಿ ನಡೆದಿದೆ. ಅಂಬಿಕಾ ಮತ್ತು ಪಾತಲಿಂಗಪ್ಪ ದಂಪತಿ ಪುತ್ರ ಸೃಜನ್(1) ಮೃತಪಟ್ಟ ಬಾಲಕ. ಮನೆಯಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಕಡಲೇಬೀಜ ನುಂಗಿದ್ದು, ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ಮಗುವನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಕಕ್ಕೆರೆ ಗ್ರಾಮದಿಂದ ಚಿತ್ರದುರ್ಗ ಮಾರ್ಗ ಮಧ್ಯೆ ಸುಮಾರು 30 ಕಿ.ಮೀ. ಅಂತರವಿದ್ದು, ಮಧ್ಯದಲ್ಲಿ ಯಾವುದೇ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Facebook Comments

Sri Raghav

Admin