ಶೇ.15ರಷ್ಟು ಕಸದ ಉಪಕರ ವಿಧಿಸಲು ಮುಂದಾಗಿರುವ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Padmanaba-Reddy--02

ಬೆಂಗಳೂರು, ನ.28- ಆಸ್ತಿ ತೆರಿಗೆ ಮೇಲೆ ಶೇ.15ರಷ್ಟು ಕಸದ ಉಪಕರ ವಿಧಿಸಲು ಮುಂದಾಗಿರುವ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತದ ವಿರುದ್ಧ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರು. ಬಿಜೆಪಿ ಸದಸ್ಯರು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಹಾಗೆಯೇ ಪಾಲಿಕೆ ಸಭೆಯಲ್ಲಿ ಪಾಲ್ಗೊಂಡರು.

ಪದ್ಮನಾಭ ರೆಡ್ಡಿ ಮಾತನಾಡಿ, 2011ರಲ್ಲೇ ಕಸಕ್ಕೆ ಸೆಸ್ ಹಾಕಿದ್ದೀರ. ಇತ್ತೀಚೆಗೆ ಆಸ್ತಿ ತೆರಿಗೆ ಸಹ ಹೆಚ್ಚಿಸಲಾಗಿದೆ. ಈಗ ಮತ್ತೆ ಕಸಕ್ಕೆ ಶೇ.15ರಷ್ಟು ಉಪಕರ ಹಾಕುವ ಮೂಲಕ ಸುಲಿಗೆ ಹೊರ ಬಿದ್ದೀರ ಎಂದು ಕಿಡಿಕಾರಿದರು. ಈಗಾಗಲೇ ಹಲವು ಸೆಸ್‍ಗಳನ್ನು ನಾಗರಿಕರು ಕಟ್ಟುತ್ತಿದ್ದಾರೆ. ಇದೇ ಬಹಳ ಹೊರೆಯಾಗಿದೆ. ಈಗ ಮತ್ತೆ ಶೇ.15ರಷ್ಟು ಉಪಕರ ಹಾಕಿದರೆ ಅವರಿಗೆ ಕರಭಾರವಾಗಲಿದೆ. ಕೂಡಲೇ ಈ ಅವೈಜ್ಞಾನಿಕ ಕರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಕೌನ್ಸಿಲ್ ಹೊರಗೆ ಒಳಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೆಡ್ಡಿ ಎಚ್ಚರಿಸಿದರು.

Facebook Comments

Sri Raghav

Admin