‘ಶೇ.20ರಷ್ಟು ನಗದು ರಹಿತ ವಹಿವಾಟು ನಡೆದರೂ ಅದೊಂದು ದೊಡ್ಡ ಸಾಧನೆಯೇ ಸರಿ’ 

ಈ ಸುದ್ದಿಯನ್ನು ಶೇರ್ ಮಾಡಿ

Cashless

ನವದೆಹಲಿ,ಡಿ.18-ಕೇಂದ್ರ ಸರ್ಕಾರವು ಶೇ.100ರಷ್ಟು ನಗದು ರಹಿತ ಆರ್ಥಿಕ ವ್ಯವಹಾರ ನಡೆಯಬೇಕು ಎಂಬ ಬಗ್ಗೆ ಎಲ್ಲೂ ಹೇಳಿಲ್ಲ. ಈ ನಿಟ್ಟಿನಲ್ಲಿ ಶೇ.15ರಿಂದ 20ರಷ್ಟು ಕ್ಯಾಶ್‍ಲೆಸ್ ವಹಿವಾಟು ನಡೆದರೂ ಅದೊಂದು ದೊಡ್ಡ ಸಾಧನೆಯಾಗುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್‍ಕುಮಾರ್ ಗಂಗ್ವಾರ್ ಅಭಿಪ್ರಾಯಪಟ್ಟಿದ್ದಾರೆ.  ನಗದು ರಹಿತ ವಹಿವಾಟುಗಳಿಂದ ದೇಶದಲ್ಲಿ ಭ್ರಷ್ಟಾಚಾರ- ಲಂಚಾವತಾರ ನಿರ್ಮೂಲನೆ ಸಾಧ್ಯವಾಗುತ್ತದೆ. ವ್ಯವಹಾರಗಳು ಪಾರದರ್ಶಕವಾಗಿರುತ್ತವೆ. ಈ ವಹಿವಾಟುಗಳಲ್ಲಿ 5ನೇ ಒಂದು ಭಾಗದಷ್ಟು ನಗದು ರಹಿತ ಟ್ರಾನ್ಸಕ್ಷನ್ ನಡೆದರೂ ಅದು ಅತ್ಯಂತ ಪರಿಣಾಮಕಾರಿಯಾಗುತ್ತದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅನೇಕ ದೇಶಗಳಲ್ಲಿ ನಗದು ರಹಿತ ವಹಿವಾಟು ಸೌಲಭ್ಯ ಜಾರಿಯಲ್ಲಿದೆ. ಅಲ್ಲಿ ಈ ವ್ಯವಹಾರಗಳು ಅತ್ಯಂತ ಯಶಸ್ವಿಯಾಗಿದೆ. ಭಾರತದಲ್ಲೂ ಅದು ಸಫಲವಾಗಬೇಕೆಂಬುದು ಕೇಂದ್ರ ಸರ್ಕಾರದ ಬಯಕೆ ಎಂದು ಅವರು ಹೇಳಿದರು.

Facebook Comments

Sri Raghav

Admin