ಶೈಕ್ಷಣಿಕ ಕ್ಷೇತ್ರದಲ್ಲಿ ನಂಜನಗೂಡಿಗೆ ಕೊನೆ ಸ್ಥಾನ : ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

nanjanugudu

ನಂಜನಗೂಡು, ಅ.5- ಈ ವರ್ಷದ ಫಲಿತಾಂಶದಲ್ಲಿ ನಂಜನಗೂಡು ತಾಲ್ಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನ ಪಡೆದಿರುವುದಕ್ಕೆ ಸಂಸದ ಆರ್.ಧೃವನಾರಾಯಣ ವಿಷಾದ ವ್ಯಕ್ತಪಡಿಸಿದರು.ತಾಲ್ಲೂಕಿನ ಮುಳ್ಳೂರು(ಮುಳ್ಳೇಗುಡ್ಡದಲ್ಲಿ) ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದ ಶ್ರೀ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಶಂಕು ಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಪವಿತ್ರ ಪುಣ್ಯ ಕ್ಷೇತ್ರವೆನಿಸಿರುವ ನಂಜನಗೂಡು ತಾಲ್ಲೂಕು ವಿದ್ಯಾ ಕ್ಷೇತ್ರದಲ್ಲಿ ಎಲ್ಲಾ ಸವಲತ್ತುಗಳನ್ನು ಪಡೆದಿದ್ದರೂ, ಫಲಿತಾಂಶದಲ್ಲಿ ಕಡೆಯ ಸ್ಥಾನ ಪಡೆದಿರುವುದು ಸರಿಯಲ್ಲ . ಇಲ್ಲಿನ ವಿದ್ಯಾಧಿಕಾರಿಗಳು ತಾಲೂಕಿನ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ನೀಡುವ ಮೂಲಕ ನೀವು ಹೆಚ್ಚಿನ ಶ್ರಮವಹಿಸಿ ಮುಂದಿನ ವರ್ಷದ ಫಲಿತಾಂಶದಲ್ಲಿ ಮೊದಲ ಸ್ಥಾನವನ್ನು ಗಳಿಸಲು ಶ್ರಮವಹಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ್‍ಗೆ ಸೂಚಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಶಿಕ್ಷಣಕ್ಕೆ ಅಂದಿನ ದಿನವೇ ಹೆಚ್ಚಿನ ಮಹತ್ವ ನೀಡಿದ್ದರು, ಒಂದು ದೇಶ ಅಭಿವೃದ್ಧಿ ಸಾಧಿಸಿದೇ ಎಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದೆ ಎಂದು ತಿಳಿಸಿದರು.ಶಿಕ್ಷಣವು ವ್ಯಕ್ತಿಗೆ ಜ್ಞಾನ ತಿಳುವಳಿಕೆ ಹಾಗೂ ಬುದ್ದಿಮತ್ತೆಯನ್ನು ಹೆಚ್ಚಿಸತ್ತದೆ ಅಲ್ಲದೆ ಯಾವುದೇ ವ್ಯಕ್ತಿ ಬಡತನದಲ್ಲಿದ್ದರೂ ಸಹ ಅವನನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುವ ಸಾಧನವಾಗಿದೆ ಎಂದು ಶಾಸಕ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.ಸಮಾಜದಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ಸಾಕಷ್ಟು ಜನರಿದ್ದಾರೆ ವ್ಯಕ್ತಿಗೆ ಯೋಚಿಸುವ ಮತ್ತು ಯೋಜಿಸುವ ಶಕ್ತಿ ಬರಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಈ ಹಿಂದೆ ಕೇಂದ್ರ ಸರ್ಕಾರದಿಂದ ನವೋದಯ ಶಾಲೆಗಳು ಇದ್ದಂತೆ ರಾಜ್ಯ ಸರ್ಕಾರ ಈಗ ಹೋಬಳಿಗೊಂದರಂತೆ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನೀಡಿರುವುದು ಶ್ಲಾಘನೀಯ ಎಂದರು.
ಈ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಶಾಲೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಅಲ್ಪಸಂಖ್ಯಾತರ ಮಕ್ಕಳಿಗೆ ಅನುಕೂಲವಾಗಲಿದೆ ಅಲ್ಲದೆ ಇಲ್ಲಿ ವ್ಯಾಸಾಂಗ ಮಾಡುವ ಮಕ್ಕಳು ಅವರ ಜೀವನ ಪೂರ್ತಿ ನಿಮ್ಮನ್ನು ನೆನಪಿಸಿಕೊಳ್ಳುವಂತಹ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಂತೆ ಕರೆ ನೀಡಿದರು.ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಹಾಗೂ ಶುದ್ಧ ಗಾಳಿ, ಬೆಳಕು ಮತ್ತು ಪ್ರಶಾಂತತೆಯ ನೂತನ ಕಟ್ಟಡ ಇನ್ನು 18 ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.ತಾ.ಪಂ.ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ನಗರಸಭಾಧ್ಯಕ್ಷೆ ಪುಷ್ಪಲತಾ, ಜಿ.ಪಂ.ಸದಸ್ಯೆ ಲತಾಸಿದ್ದಶೆಟ್ಟಿ, ಪುಷ್ಪನಾಗೇಶ್‍ರಾಜ್ ತಾ.ಪಂ.ಸದಸ್ಯರಾದ ಶಿವಣ್ಣ, ಬಿ.ಎಸ್.ರಾಮು, ಮಹದೇವನಾಯ್ಕ, ವೆಂಕಟೇಶ್, ಮಹೇಂದ್ರ, ಹೊರಳವಾಡಿ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ, ಬದನವಾಳು ಗ್ರಾ.ಪಂ.ಅಧ್ಯಕ್ಷ ಮಹೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ಬಣ್ಣ, ಕಾಂಗ್ರೆಸ್ ಮುಖಂಡರಾದ ಯು.ಎನ್.ಪದ್ಮನಾಭರಾವ್, ಆಶ್ರಯ ಸಮಿತಿ ಅಧ್ಯಕ್ಷ ಬಾಲಚಂದ್ರ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin