ಶೈಕ್ಷಣಿಕ ವ್ಯವಸ್ಥೆ ಸುಧಾರಣೆಯತ್ತ ದಾಪುಗಾಲು ಹಾಕಲಿದೆ ಶಾಸಕ ಡಾ. ವಿಜಯಾನಂದ ಕಾಶಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

SHIKSHAKA
ಅಮೀನಗಡ,ಸೆ.10- ಅನುಭವಿ ರಾಜಕಾರಣಿ ತನ್ವೀರ್ ಶೇಠ್ ಅವರು ಶಿಕ್ಷಣ ಸಚಿವರಾಗಿದ್ದು ಶಿಕ್ಷಕರ ಸಮಸ್ಯೆಗಳೂ ಸೇರಿದಂತೆ ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಯತ್ತ ದಾಪುಗಾಲು ಹಾಕಲಿದೆ ಎಂದು ಹುನಗುಂದ ಶಾಸಕ ಡಾ. ವಿಜಯಾನಂದ ಕಾಶಪ್ಪನವರ ತಿಳಿಸಿದರು.  ಸಮೀಪದ ಬೆನಕನವಾರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2014-15ನೇ ಸಾಲಿನಲ್ಲಿ ಮಂಜೂರಾದ ಗಣಕಯಂತ್ರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಸರಕಾರ ಶಿಕ್ಷಣ ಹಾಗೂ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವತ್ತ ಪ್ರಯತ್ನ ಮುಂದುವರೆಸಿದೆ. ಅಪಾರ ಅನುಭವವುಳ್ಳ ಸಚಿವರಾದ ತನ್ವೀರ್ ಶೇಠ್ ಅವರು ಶಿಕ್ಷಣ ಸಚಿವರಾದ ನಂತರ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಹೆಜ್ಜೆ ಇಟ್ಟಿದ್ದಾರೆ.

 

 

ಅದರೊಂದಿಗೆ ಅನೇಕ ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳನ್ನೂ ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಸರಕಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದು ಪಾಲಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ ಎಂದರು. ತಾಪಂ ಸದಸ್ಯ ಮಂಜುನಾಥ ಗೌಡರ, ಸಾನ್ನಿಧ್ಯ ವಹಿಸಿದ್ದ ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮಿಜಿ ಮಾತನಾಡಿದರು. ಕಮತಗಿ ಪಪಂ ಅಧ್ಯಕ್ಷ ಮಹಾಂತೇಶ ಅಂಗಡಿ, ಬಿ.ಸಿ.ಅಂಟರತಾನಿ, ಸಿಆರ್‍ಪಿ ರಾಜು ಸುಂಕದ, ಸತ್ಯಪ್ಪ ದಳವಾಯಿ, ಮುಖ್ಯಗುರು ಎಸ್.ಎಂ.ಸುಂಕದ, ಎಸ್ಡಿಎಂಸಿ ಅಧ್ಯಕ್ಷ ಯಲಗೂರದಗೌಡ ಗೌಡರ, ರೇಣವ್ವ ಕಮತಗಿ, ಮಲ್ಲವ್ವ ಬೆಳ್ಳಿ, ನಿಂಗಪ್ಪ ಅಂಟರತಾನಿ, ಸಿದ್ದಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.

 

► Follow us on –  Facebook / Twitter  / Google+

 

 

Facebook Comments

Sri Raghav

Admin