ಶೋಷಿತ ದನಿಯಾಗಿದ್ದ ಅರಸುರವರ ಶ್ಲಾಘನೆ

ಈ ಸುದ್ದಿಯನ್ನು ಶೇರ್ ಮಾಡಿ

chintamani-1

ಚಿಂತಾಮಣಿ, ಆ.22-ದೇವರಾಜ ಅರಸು ರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೂರ ದೃಷ್ಟಿಯನ್ನು ಇಟ್ಟುಕೊಂಡು ಶೋಷಿತರ, ದೀನದಲಿತರ, ಹಿಂದುಳಿದವರ್ಗಗಳ ಮತ್ತು ಅಲ್ಪಸಂಖ್ಯಾಂತರಿಗೆ ತಮ್ಮ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಶ್ಲಾಘಿಸಿದರು.ನಗರದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಕ್ರಾಂತಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ 101ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕ್ರಾಂತಿಯ ಹರಿಕಾರರೆಂದು ಹೆಸರು ಪಡೆದಿದ್ದ ಅರಸುರವರು ರಾಜಕಾರಣದಲ್ಲಿ ದೂರ ದೃಷ್ಟಿಯನ್ನು ಹೊಂದಿದ್ದು ಇಂದಿನ ರಾಜಕಾರಣಿಗಳು ಅವರ ದೂರ ದೃಷ್ಟಿ ಯನ್ನು ಅಳವಡಿಕೊಳ್ಳಬೇಕಾಗಿದೆ ಎಂದರು.
ಅವರ ಜಾರಿಗೆ ತಂದಿರುವ ಮಲ ಹೊರುವ ಪದ್ದತಿ ನಿಷೇಧ, ಜೀತ ಪದ್ದತಿ ನಿರ್ಮೂಲನೆ, ಉಳುವುವನೇ ಭೂಮಿಯ ಒಡೆಯ, ಮತಿತ್ತರರ ಯೋಜನೆಗಳನ್ನು ಜಾರಿಗೆ ತಂದು ಶೋಷಿತ ವರ್ಗದವರ ಆಶಾಕಿರಣವಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ತತ್ವ, ಸಿದ್ಧಾಂತ, ಆದರ್ಶಗಳನ್ನು ಇಂದಿನ ಯುವಕರು ಜೀವನದಲ್ಲಿ ಆಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳ ಬೇಕೆಂದರು.  ತಾಲೂಕು ಪಂಚಾಯಿತಿ ಅಧ್ಯಕ್ಷ ಶಾಂತಮ್ಮ, ನಗರಸಭೆ ಪೌರಾಯುಕ್ತರಾದ ರಾಜಣ್ಣ, ನಗರಸಭೆ ಅಧ್ಯಕ್ಷ ಅನ್ವರ್‍ಪಾಷಾ, ನಗರಸಭಾ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.ಹಿಂದುಳಿದ ವರ್ಗಗಳ ಮುಖಂಡ ಮುದುಕೃಷ್ಣ ಯಾದವ್, ರಾಧಾಕೃಷ್ಣ, ಶಿಕ್ಷಕ ಮುನಿರೆಡ್ಡಿ ಮತ್ತು ವಿಚಾರವಾದಿ ಚಿಂತಕಿ ಹಸೀನಾಬೇಗಂ ರವರನ್ನು ಸನ್ಮಾನಿಸಿ ಗೌರವಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin