ಶೌಚಾಲಯ ಕ್ಕೆ ಒತ್ತಾಯಿಸಿ ಸೆ 6 ಕ್ಕೆ ಪ್ರತಿಭಟನೆ : ವಾಟಾಳ್ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

vatal
ಬೆಂಗಳೂರು, ಆ.30- ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಆನೇಕಲ್ ತಾಲೂಕು ಸೇರಿದಂತೆ ವಿವಿಧ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಿ ಬೇಕೇ ಬೇಕು ಶೌಚಾಲಯ ಬೇಕು ಎಂಬ ವಿನೂತನ ಶೌಚಾಲಯ ಚಳವಳಿಯನ್ನು ಸೆ.6 ರಂದು ಹಮ್ಮಿಕೊಳ್ಳಲಾಗಿದೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಶೌಚಾಲಯ ವಿಲ್ಲದೆ ಬಯಲು ಪ್ರದೇಶಗಳಿಗೆ ಹೋಗಲು ಮುಜುಗರ ಪಡುತ್ತಿದ್ದಾರೆ. ಸಂಜೆಯಾಗುವವರೆಗೂ ಕಾಯ್ದು ಅವರು ಶೌಚಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಕನಿಷ್ಠ ಒಂದು ಗ್ರಾಮಕ್ಕೆ 5ರಂತೆ ಸುಸಜ್ಜಿತವಾದ ಶೌಚಾಲಯ ನಿರ್ಮಿಸಿ ಮಹಿಳೆಯರ ಸಮಸ್ಯೆಯನ್ನು ನಿವಾರಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.

ಗ್ರಾಮೀಣ ಮಹಿಳೆಯರ ಶೌಚಾಲಯಗಳಿಗಾಗಿ ವರ್ಷವಿಡೀ ನಿರಂತರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಒಂದು ಶೌಚಾಲಯಕ್ಕೆ ಕನಿಷ್ಠ 10 ಲಕ್ಷ ರೂ. ಖರ್ಚು ಮಾಡಿ ಉತ್ತಮ ನೀರಿನ ಸೌಲಭ್ಯವುಳ್ಳ ಶೌಚಾಲಯ ನಿರ್ಮಾಣ ವಾಗಬೇಕು ಎಂದು ಒತ್ತಾಯಿಸಿದರು.  ನಗರದಲ್ಲೂ ಬಹುತೇಕ ಸಾರ್ವ ಜನಿಕ ಶೌಚಾಲಯಗಳು ಹದಗೆಟ್ಟಿದ್ದು, ಅವುಗಳನ್ನು ಶುಚಿ ಗೊಳಿಸುವುದರ ಮೂಲಕ ಸಾರ್ವ ಜನಿಕರಿಗೆ ಅನುಕೂಲ ಮಾಡಿಕೊಡು ವಂತೆ ಸರ್ಕಾರದ ಮುಂದೆ ಬೇಡಿಕೆ ಇಡುತ್ತೇವೆ ಎಂದರು. ಶೌಚಾಲಯಗಳ ನಿರ್ಮಾಣ ವಿಷಯವನ್ನು ರಾಜ್ಯ, ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ ವಾಟಾಳ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕು ಕಚೇರಿ ಮುಂದೆ ಶೌಚಾಲಯದ ಪರಿಕರಗಳನ್ನಿಟ್ಟು ಪ್ರದರ್ಶಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin