ಶೌಚಾಲಯ ನಿರ್ಮಾಣದಲ್ಲೂ ದಂಧೆ

ಈ ಸುದ್ದಿಯನ್ನು ಶೇರ್ ಮಾಡಿ

public-toilets
ಹಿರೀಸಾವೆ, ಏ.25-ಶೌಚಾಲಯ ಇಲ್ಲದವರಿಗೆ ಮುಂದಿನ ತಿಂಗಳಿಂದ ಪಡಿತರ ಪದಾರ್ಥ ಲಭ್ಯವಿಲ್ಲವೆಂದು ಸರ್ಕಾರ ಆದೇಶ ನೀಡಿದೆ ಎಂದು ಜನತೆಗೆ ಭಯದ ವದಂತಿ ಹಬ್ಬಿಸಿರುವ ಮಧ್ಯವರ್ತಿಗಳು ಹಾಗೂ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಇದನ್ನೆ ದಂಧೆಯಾಗಿ ಆರಂಭಿಸಿದ್ದಾರೆ.ಕಳೆದ ತಿಂಗಳು ಜಿಲ್ಲಾ ಪಂಚಾಯಿತಿ ವತಿಯಿಂದ ಹೋಬಳಿಯ ಕೆಲ ಗ್ರಾಮಗಳಲ್ಲಿ ಶೌಚಾಲಯ ಉಳ್ಳವರ ಪಡಿತರ ಕಾರ್ಡಿಗೆ ಒಂದು ಸ್ಟಿಕ್ಕರ್ ಅಂಟಿಸಲಾಗಿದ್ದು, ಅದರಲ್ಲಿ ನಮ್ಮ ಮನೆಯಲ್ಲಿ ಶೌಚಾಲಯವಿದೆ ಅದನ್ನು ನಾವು ಬಳಸುತಿದ್ದೇವೆ ಎಂದು ಬರೆಯಲಾಗಿದೆ.

ಸದ್ಯ ಗ್ರಾಮೀಣ ಪ್ರದೇಶದ ಕೆಲ ಮನೆಗಳಲ್ಲಿ ಶೌಚಾಲಯ ಕಟ್ಟಿಕೊಂಡಿರುವುದಿಲ್ಲ, ಪಕ್ಕದಲ್ಲಿಯೇ ತೋಟ, ತೋಪು ಹಾಗೂ ಬಯಲು ಪ್ರದೇಶವಿರುವ ಮನೆಯವರು ಬಯಲನ್ನೇ ಶೌಚವಾಗಿ ಉಪಯೋಗಿಸಿಕಳ್ಳುತ್ತಿದ್ದಾರೆ, ಆದರೆ ಶೌಚಾಲಯ ಇಲ್ಲದವರಿಗೆ ಪಡಿತರ ಪದಾರ್ಥಗಳು ಸಿಗುವುದಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಜನತೆ ದಿಗಿಲು ಬಿದ್ದಿದ್ದಾರೆ.ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಮಧ್ಯವರ್ತಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಜನತೆಗೆ ಇದನ್ನೇ ಬೇರೇ ರೀತಿಯಲ್ಲಿ ತಪ್ಪು ಮಾಹಿತಿ ನೀಡಿ ಹಣ ಮಾಡಿಕೊಳ್ಳಲು ದಾರಿ ರೂಪಿಸಿಕೊಂಡಿದ್ದಾರೆ.ದಂಧೆಕೋರರು ಶೌಚಾಲಯ ಇಲ್ಲದವರ ಮನೆಗೆ ನೇರ ಭೇಟಿ ನೀಡಿ ಶೌಚಾಲಯ ನಿರ್ಮಿಸಿ ನಾನು ಗ್ರಾಮ ಪಂಚಾಯಿತಿ ವತಿಯಿಂದ ಬಿಲ್ ಕೊಡಿಸುತ್ತೇನೆ ಎಂದು ಹೇಳಿ ಕಮಿಷನ್ ರೀತಿಯಲ್ಲಿ ರೂ.2500 ರಿಂದ ರೂ.3500 ದವರಗೆ ಹಣ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮಾಹಿತಿ ಇಲ್ಲ:
ಪಡಿತರ ಚೀಟಿಗೆ ಸ್ಟಿಕ್ಕರ್ ಅಂಟಿಸುವ ಹಾಗೂ ಶೌಚಾಲಯ ಇಲ್ಲದವರಿಗೆ ಪಡಿತರ ಪದಾರ್ಥ ಸಿಗುವುದಿಲ್ಲ ಎಂಬುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿರುವುದಿಲ್ಲ, ನಮಗೆ ಮಾಹಿತಿ ಬಂದಲ್ಲಿ ತಕ್ಷಣ ಜನತೆಗೆ ನಿಖರ ಮಾಹಿತಿ ನೀಡಲಾಗುತ್ತದೆ, ಆದರೆ ಸರ್ಕಾರಿ ಆದೇಶವನ್ನು ಈ ರೀತಿ ದುರುಪಯೋಗ ಪಡಿಸಿಕೊಂಡಲ್ಲಿ ಮೇಲಧಿಕಾರಿಗಳ ಆದೇಶದಂತೆ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಪ ತಹಸೀಲ್ದಾರ್ ಮೋಹನ್‍ಕುಮಾರ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin