ಶೌಚಾಲಯ ನಿರ್ಮಿಸಿ ಕೊಡದಿದ್ದರೆ ಉಗ್ರ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

chikkamangaluru

ಚಿಕ್ಕಮಗಳೂರು, ಅ.6- ನಗರಸಭೆಯಿಂದ ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಿ ಕೊಡದಿದ್ದಲ್ಲಿ ಮುಂದೊಂದು ದಿನ ಉಗ್ರ ಹೋರಾಟ ಮಾಡುವುದಾಗಿ ನಗರಸಭಾ ಸದಸ್ಯ ರೂಬೆನ್ ಮೊಸಸ್ ಎಚ್ಚರಿಸಿದರು ನಗರಸಭೆ ಮುಂದೆ ಗೌರಿಕಾಲುವೆ, ಕಲ್ಲುದೊಡ್ಡಿ, ವಾಜಪೇಯಿ ಬಡಾವಣೆ, ಇಂದಿರಾ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ಫಲಾನುಭವಿಗಳು ಚೆಂಬು ಹಿಡಿದು ಅಣಕು ಪ್ರದರ್ಶನ ವೇಳೆ ಅವರು ಮಾತನಾಡಿದರು. ಫಲಾನುಭವಿಗಳು ಶೌಚಾಲಯಕ್ಕಾಗಿ ಕಳೆದ ಒಂದು ವರ್ಷದಿಂದ ಮೂರ್ನಾಲ್ಕು ಬಾರಿ ಅರ್ಜಿ ಸಲ್ಲಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರ್ಕಾರದಿಂದ ಬಂದ ಅನುದಾನಗಳು ಪ್ರಭಾವಿ ಸದಸ್ಯರ ಪಾಲಾಗುತ್ತಿದ್ದು, ಬಡಜನರು ಪರಿತಪಿಸುವಂತಾಗಿದೆ ಎಂದು ದೂರಿದರು.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನದಲ್ಲಿ ಫಲಾನುಭವಿಗಳಿಂದ ನಗರಸಭೆ ಮುಂದೆ ಮಲ ವಿಸರ್ಜನೆ ಮಾಡಿಸಲಾಗುತ್ತದೆ ಎಂದು ಎಚ್ಚರಿಸಿದರು.ನಗರಸಭೆ ಸದಸ್ಯರಾದ ಸುರೇಖಾ ಸಂಪತ್‍ರಾಜ್, ಪುಟ್ಟಸ್ವಾಮಿ, ತೇಜಕುಮಾರ್, ಲಕ್ಷ್ಮಣ್, ಜಗದೀಶ್, ನಾಮಿನಿ ಸದಸ್ಯರಾದ ಸಂದೇಶ್, ಕೃಷ್ಣಮೂರ್ತಿ, ಕೃಷ್ಣಪ್ಪ, ಮಹೇಶ್, ನಾಸೀರ್ ಆಹಮದ್, ಮುಖಂಡರಾದ ಬದ್ರುದೀನ್, ಆನಂದ್, ಮಧು, ಆಶ್ರಯ ಸಮಿತಿ ಸದಸ್ಯ ಸಿಲ್ವಸ್ಟರ್ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin