ಶ್ರವಣಬೆಳಗೊಳದಲ್ಲಿ ದೇವೇಗೌಡರಿಗೆ ಅಪಮಾನ : ಹಕ್ಕು ಚ್ಯುತಿ ಮಂಡಿಸಿದ ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

revanna
ಬೆಂಗಳೂರು, ಫೆ.8- ಶ್ರವಣಬೆಳಗೊಳದಲ್ಲಿ ನಡೆದ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮಾತನಾಡಲು ಅವಕಾಶ ನೀಡದಿರುವುದು ಹಾಗೂ ತಮ್ಮ ಹೆಸರನ್ನು ಉಲ್ಲೇಖಿಸದೆ ಇರುವುದನ್ನು ಶಾಸಕ ಎಚ್.ಡಿ.ರೇವಣ್ಣ ಹಕ್ಕು ಚ್ಯುತಿ ಪ್ರಸ್ತಾಪ ಮಂಡಿಸಿ ಈ ವಿಷಯವನ್ನು ಹಕ್ಕು ಬಾದ್ಯತಾ ಸಮಿತಿಗೆ ವರ್ಗಾಯಿಸುವಂತೆ ಪಟ್ಟು ಹಿಡಿದು ಧರಣಿ ನಡೆಸಿದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು. ನಿನ್ನೆ ಶ್ರವಣಬೆಳಗೊಳದ ಗೊಮ್ಮಟ ನಗರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಪಾಲ್ಗೊಂಡಿದ್ದರು. ಅಂತಹ ಸಂದರ್ಭದಲ್ಲಿ ಮಾಜಿ ಪ್ರಧಾನಿಯಾದ ಎಚ್.ಡಿ.ದೇವೇಗೌಡರಿಗೆ ಮಾತನಾಡಲು ಅವಕಾಶ ನೀಡಿಲ್ಲ. ನನ್ನ ಹೆಸರು ಆಹ್ವಾನ ಪತ್ರಿಕೆಯಲ್ಲಿದ್ದರೂ ಕರೆಯಲಿಲ್ಲ. ಉದ್ದೇಶಪೂರ್ವಕವಾಗಿ ನಮ್ಮ ಹೆಸರನ್ನು ಪ್ರಸ್ತಾಪಿಸಿಲ್ಲ. ನಮ್ಮ ಹಕ್ಕು ಚ್ಯುತಿಯಾಗಿದೆ. ಇದನ್ನು ಹಕ್ಕು ಬಾದ್ಯತಾ ಸಮಿತಿಗೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಕಾಗೋಡು ತಿಮ್ಮಪ್ಪ ಅವರು ಈ ವಿಷಯ ಸಂಬಂಧ ಜಿಲ್ಲಾಧಿಕಾರಿಗಳಿಂದ ವರದಿ ಪಡೆದುಕೊಂಡು ಕ್ರಮ ವಹಿಸಲಾಗುವುದು. ವೈಯಕ್ತಿಕ ವಿಚಾರದ ಚರ್ಚೆ ಸದನದಲ್ಲಿ ಬೇಡ ಎಂದಾಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮೇಲ್ನೋಟಕ್ಕೆ ಹಕ್ಕು ಚ್ಯುತಿಯಾಗಿದೆ. ಇದನ್ನು ಹಕ್ಕು ಬಾದ್ಯತಾ ಸಮಿತಿಗೆ ವರ್ಗಾಯಿಸಬೇಕು ಎಂದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಆರ್.ಅಶೋಕ್, ಸಿ.ಪಿ.ರವಿ, ಅಪ್ಪಚ್ಚು ರಂಜ£, ಅವರ ಬೆಂಬಲಕ್ಕೆ ನಿಂತರು.  ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಶಿವಶಂಕರ ರೆಡ್ಡಿ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲು ಸಭಾಧ್ಯಕ್ಷರು ಸೂಚಿಸಿದ್ದಾರೆ ಎಂದಾಗ ಸಮಾಧಾನಗೊಳ್ಳದ ನಾಯಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಸಿ.ಟಿ.ರವಿ ರಾಜ್ಯದಲ್ಲಿರುವ ಏಕೈಕ ಮಾಜಿ ಪ್ರಧಾನಿ ದೇವೇಗೌಡರು. ಅವರ ತವರು ಜಿಲ್ಲೆಯಲ್ಲೇ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸದನ ಪ್ರವೇಶಿಸಿದ ಜಮೀರ್ ಅಹಮ್ಮದ್ ಖಾನ್ ಅವರನ್ನು ಕುರಿತು ಜಮೀರ್ ಬಾಯ್ ದೇವೇಗೌಡರ ಬಗ್ಗೆ ಚರ್ಚೆ ನಡೆಯುತ್ತಿದೆ. ರೇವಣ್ಣ ಅವರು ಧರಣಿ ನಡೆಸುತ್ತಿದ್ದಾರೆ ಎಂದು ಕೆಣಕಿದಾಗ ರಾಷ್ಟ್ರಪತಿ ನಿಮ್ಮವರು ಎಂದು ತಿರುಗೇಟು  ನೀಡಿದರು. ರಾಷ್ಟ್ರಪತಿಯವರ ಪ್ರತಿಯೊಂದು ನಿಮಿಷದ ಕಾರ್ಯಕ್ರಮವೂ ರಾಷ್ಟ್ರಪತಿ ಭವನದಲ್ಲಿ ನಿರ್ಧಾರವಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ ಎನ್ನುತ್ತಿದ್ದಂತೆ ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆರೋಪ ಮಾಡಿದರು. ಈ ವೇಳೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಹಕ್ಕು ಚ್ಯುತಿ ಪ್ರಸ್ತಾಪವನ್ನು ಹಕ್ಕು ಬಾದ್ಯತಾ ಸಮಿತಿಗೆ ವರ್ಗಾಯಿಸಲು ರೂಲಿಂಗ್ ನೀಡಲಾಯಿತು.

Facebook Comments

Sri Raghav

Admin