ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿರುವ 21 ಮಳಿಗೆಗಳ ಹರಾಜು ಮುಂದಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು, ಫೆ.16- ಬೀಡ್‍ದಾರರ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯಿಂದಾಗಿ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿರುವ 21 ಮಳಿಗೆಗಳ ಹರಾಜು ಪ್ರಕ್ರಿಯೆ ಮುಂದೂಡಲಾಯಿತು.ಕಳೆದ ಕೆಲವು ವರ್ಷಗಳಿಂದ 21 ಮಳಿಗೆಗಳು ಖಾಲಿ ಇದ್ದು, ಇದರಿಂದ ದೇವಸ್ಥಾನಕ್ಕೆ ಆದಾಯವಿಲ್ಲದೇ ವರ್ಷ ವರ್ಷಕ್ಕೆ ಅನಾವಶ್ಯಕವಾಗಿ ನಿರ್ವಹಣೆಗಾಗಿ ಹಣ ಖರ್ಚು ಮಾಡಬೇಕಾಗಿತ್ತು. ಸಾರ್ವಜನಿಕರಿಂದಲೂ 21 ಮಳಿಗೆಗಳನ್ನು ಹರಾಜು ಮಾಡಿ ವಿವಿಧ ಅಂಗಡಿಗಳನ್ನು ತೆರೆಯುವಂತೆ ಒತ್ತಡವು ಸಹ ಇದ್ದ ಕಾರಣ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ನಿನ್ನೆ ಟೆಂಡರ್ ಕರೆಯಲಾಗಿತ್ತು 21 ಮಳಿಗೆಗೆ 10 ಸಾವಿರ ರೀ ಠೇವಣಿ ನೀಡಿ 64 ಜನ ಬೀಡ್‍ಗಾಗಿ ಭಾಗವಹಸಿದ್ದರು.ಪ್ರಕ್ರಿಯೇ ಆರಂಭದಲ್ಲಿ ಕೆಲವರು ಮಾತನಾಡಿ, ಈಗಾಗಲೇ 6 ಅಂಗಡಿಗಳು ಕಾರ್ಯನಿರ್ವಹಿಸುತ್ತೀವೆ. ಅವಧಿ ಮುಗಿದಿದ್ದರು ತೆರವುಗೊಳಿಸಿಲ್ಲಾ ಎಂದು ಆಕ್ಷೇಪಿಸಿ 21 ಅಂಗಡಿಗ ಜೊತೆ 6 ಅಂಗಡಿಗಳ ಹರಾಜು ಮಾಡುವಂತೆ ಒತ್ತಾಯಿಸಿದಾಗ ಗೊಂದಲವುಂಟಾಗಿ ಅಂತಿಮವಾಗಿ ಪ್ರಕ್ರಿಯೆಯನ್ನು ಮುಂದೂಡಲು ದೇವಸ್ಥಾನ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ತಹಸಿಲ್ಧಾರ್ ಯತೀರಾಜ್, ಗಂಗಯ್ಯ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin