ಶ್ರೀಕೋಡಿ ರಂಗನಾಥಸ್ವಾಮಿ ಕುಂಭಾಭಿಷೇಕ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

tumakuru

ತುಮಕೂರು, ಫೆ.3– ಜಿಲ್ಲೆಯ ತುರುವೇಕೆರೆ ತಾಲೂಕು ಮುದಿಗೆರೆ ಮಜರೆ ಕೋಡಿಪುರ ಶ್ರೀಕೋಡಿ ರಂಗನಾಥ ದೇವಾಲಯ ಜೀರ್ಣೋದ್ದಾರ ಟ್ರಸ್ಟ್ ವತಿಯಿಂದ ಶ್ರೀಕೋಡಿ ರಂಗನಾಥಸ್ವಾಮಿ ಪ್ರತಿಷ್ಠಾ ಮಹಾಕುಂಭಾಭೀಷೇಕ ಮಹೋತ್ಸವವು ಜರುಗಿತು.ಮಹಾಗಣಪತಿ ಪೂಜೆ ಆರಂಭವಾದ ಶ್ರೀ ಕೋಡಿ ರಂಗನಾಥಸ್ವಾಮಿ ಪ್ರತಿಷ್ಠಾ ಮಹೋತ್ಸವ 16 ಜನ ಮಹಿಳೆಯರು ತಂದಿದ್ದ ಗಂಗಾಜಲದಿಂದ ಸ್ವಾಮಿಗೆ ಅಭಿಷೇಕ ಮಾಡಲಾಯಿತು.ವಾಚನ,ಪಂಚಗವ್ಯ ಪ್ರಾಶನ,ಗರುಡ ದ್ವಜಾರೋಹಣ, ಗಂಗಾವರಣ,ದೇವತಾನಾಂದಿ,ಅಂಕುರಾರ್ಪಣೆ ನಡೆಯಿತು.ಕಾರ್ಯಕ್ರಮ ಕುರಿತು ಮಾತನಾಡಿದ ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಂಪರಾಜು, ಕ್ಷೇತ್ರದ ಅಭಿವೃದ್ದಿಗೆ ಭಕ್ತರ ಕೊಡುಗೆ ಅಪಾರವಾಗಿದೆ.

ನೂರಾರು ಮೈಲಿ ದೂರದಿಂದ ಇಲ್ಲಿಗೆ ಆಗಮಿಸಿ ದೇವರಿಗೆ ಕಾಣಿಕೆ ಸಲ್ಲಿಸಿ,ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.ಕೋಡಿ ಶ್ರೀರಂಗನಾಥಸ್ವಾಮಿ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷ ಕಾಳಹಸ್ತಾಚಾರ್ ಮಾತನಾಡಿ,12 ವರ್ಷಕ್ಕೋಮ್ಮೆ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.ದೇವಾಲಯ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಆರ್.ರಾಮುಸ್ವಾಮಿ ಅವರು ವರದಿ ಮಂಡಿಸಿದರು.ಕಾರ್ಯಕ್ರಮದಲ್ಲಿ ಮುತ್ತುಗದಹಳ್ಳಿ ಶಿವಣ್ಣ,ಟ್ರಸ್ಟ್‍ನ ಕಾರ್ಯಾಧ್ಯಕ್ಷ ಕೆ.ಆರ್.ರಘುನಾಥಾಚಾರ್, ಉಪಾಧ್ಯಕ್ಷರುಗಳ ಕೆ.ಶಂಕರಾ ಚಾರ್, ಬಿ.ನಾಗರಾಜು, ದೇವಾಲಯದ ಅಭಿವೃದ್ದಿಗೆ ಶ್ರಮಿಸಿದ ನಾಗರಿಕರನ್ನು ಸನ್ಮಾನಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin