ಶ್ರೀಗಂಧದ ಮರದ ತುಂಡುಗಳನ್ನು ಕಳ್ಳತನ ಮಾಡುತ್ತಿದ್ದ 6 ಮಂದಿ  ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಫೆ.8-ಶ್ರೀಗಂಧದ ಮರದ ತುಂಡುಗಳನ್ನು ಕಳ್ಳತನ ಮಾಡುತ್ತಿದ್ದ ಆರು ಮಂದಿ ಖದೀಮರನ್ನು ಚನ್ನಗಿರಿ ಪೊಲೀಸರು ಬಂಧಿಸಿ ಒಂದೂವರೆ ಲಕ್ಷ ಮೌಲ್ಯದ ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.ಚನ್ನಗಿರಿ ನಿವಾಸಿಗಳಾದ ಮಹಮ್ಮದ್ ರಫೀಕ್, ಮನ್ಸೂರ್ ಬೇಗ್, ಮಹಮ್ಮದ್ ಶಫಿ, ಮಹಮ್ಮದ್ ಇಸ್ಮಾಯಿಲ್, ಆಯಿವುಲ್ಲಾ ಬಂಧಿತ ಆರೋಪಿಗಳು.ಚನ್ನಗಿರಿ ಪೊಲೀಸ್ ಠಾಣೆಯ ಮುಂಭಾಗವಿದ್ದ ತಪ್ಪಲಿನಲ್ಲಿ ಮೇಲಿನ ಆರು ಮಂದಿ ಖದೀಮರು 50 ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಕಡಿದಿದ್ದರು. ಒಟ್ಟು ಒಂದೂವರೆ ಲಕ್ಷ ಮೌಲ್ಯದ ಗಂಧದ ತುಂಡುಗಳನ್ನು ಕದ್ದು ಪರಾರಿಯಾಗಿದ್ದರು.ಈ ಪ್ರಕರಣ ಕೈಗೆತ್ತಿಕೊಂಡ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಮೇನೇಗೌಡ ನೇತೃತ್ವದ ಪೊಲೀಸ್ ತಂಡ ಆರು ಮಂದಿಯನ್ನು ಬಂಧಿಸಿ ಒಂದೂವರೆ ಲಕ್ಷ ಮೌಲ್ಯದ ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಕಾರ್ಯಾಚರಣೆಯಲ್ಲಿ ಚನ್ನಗಿರಿಯ ಸಿಪಿಐ ಆರ್.ಆರ್.ಪಾಟೀಲ್, ಪಿಎಸ್‍ಐ ವೀರಬಸಪ್ಪ ಹಾಗೂ ಸಿಬ್ಬಂದಿ ತೊಡಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin