ಶ್ರೀಗಂಧ ಚೋರನ ಬಂಧನ : 8.80 ಲಕ್ಷ ರೂ. ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

a0916742993b7c02c692a3983d51ea18_Lಬೆಂಗಳೂರು,ಆ.3- ಶ್ರೀಗಂಧದ ಮರದ ತುಂಡುಗಳನ್ನು ಕಳವು ಮಾಡಿದ್ದ  ಚೋರನನ್ನು ಬಂಧಿಸಿರುವ ದಕ್ಷಿಣ ವಿಭಾಗದ ತಲಘಟ್ಟಪುರ ಪೊಲೀಸರು  ಆತನಿಂದ 8.80 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಹೊಸಕೆರೆಹಳ್ಳಿಯ ಕೃಷ್ಣಪ್ಪ ಬಡಾವಣೆ ನಿವಾಸಿ ನಾಗರಾಜ(32) ಬಂಧಿತ ಆರೋಪಿಯಾಗಿದ್ದು , ಈತನಿಂದ 13 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳು, ಕಾರು, ಆಟೋ ರಿಕ್ಷಾ ಹಾಗೂ ಒಂದು ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿ ನಾಗರಾಜ ಮತ್ತು ಸಹಚರರು ವಾಹನಗಳಲ್ಲಿ ಶ್ರೀಗಂಧದ ತುಂಡುಗಳನ್ನು ಕಳವು ಮಾಡಿ ಅದನ್ನು ಮಾರಾಟ ಮಾಡಲು ಬರುತ್ತಿರುವ ಬಗ್ಗೆ  ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು  ತುರಹಳ್ಳಿ ಫಾರೆಸ್ಟ್‍ನ 100 ಅಡಿ ರಸ್ತೆ ಬಳಿ ಇಂದು ಬೆಳಗ್ಗೆ 8.50ರಲ್ಲಿ  ಆರೋಪಿಗಳ ವಾಹನವನ್ನು ಸುತ್ತುವರಿಯುತ್ತಿದ್ದಂತೆ  ಆರೋಪಿಗಳಾದ ಶಶಿಕುಮಾರ, ನವೀನ ಮತ್ತು ಬಸವರಾಜು ಎಂಬುವರು ವಾಹನಗಳನ್ನು ಬಿಟ್ಟು ಪರಾರಿಯಾಗಿರುತ್ತಾರೆ.

ಈ ವೇಳೆ ನಾಗರಾಜನನ್ನು ಬಂಧಿಸಿ  ವಾಹನಗಳ ಸಮೇತ ಮಾಲನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣ ವಿಭಾಗದ ಉಪ ಪೊಲೀಸರು  ಕಮೀಷನರ್ ಎಸ್.ಡಿ.ಶರಣಪ್ಪ , ಸಹಾಯಕ ಪೊಲೀಸರು  ಕಮೀಷನರ್ ಮಂಜುನಾಥ್ ಚೌಧರಿ, ಇನ್‍ಸ್ಪೆಕ್ಟರ್ ರಾಮಪ್ಪ  ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin