ಶ್ರೀದೇವಿ ಸಾವಿನ ಸುತ್ತ ಬೆಳೆಯುತ್ತಲೇ ಇದೆ ಅನುಮಾನದ ಹುತ್ತ …!

ಈ ಸುದ್ದಿಯನ್ನು ಶೇರ್ ಮಾಡಿ

Sridevi--01

ಮುಂಬೈ/ದುಬೈ,ಫೆ.26-ದುಬೈನಲ್ಲಿ ಹೃದಯಾಘಾತದಿಂದ ಹಠಾತ್ ನಿಧನ ಹೊಂದಿದ ಭಾರತೀಯ ಚಿತ್ರರಂಗದ ಖ್ಯಾತ ಅಭಿನೇತ್ರಿ ಶ್ರೀದೇವಿ ಅವರ ಸಾವಿನ ಸುತ್ತ ಅನುಮಾದ ಹುತ್ತ ಬೆಳೆಯುತ್ತಿದೆ. ಉತ್ತಮ ಆರೋಗ್ಯ ಹೊಂದಿದ್ದ ಶ್ರೀದೇವಿಯವರು ಹಠಾತ್ ಹೃದಯಾಘಾತಕ್ಕೆ ಒಳಗಾಗಿರುವ ಬಗ್ಗೆ ಅವರ ಅಭಿಮಾನಿಗಳಲ್ಲಿ ಅನುಮಾನ ಮನೆ ಮಾಡಿದೆ.  ಶ್ರೀದೇವಿಯವರಿಗೆ ಹೃದ್ರೋಗ ಸಮಸ್ಯೆಯ ಯಾವುದೇ ಹಿನ್ನೆಲೆ ಇರಲಿಲ್ಲ ಎಂದು ಅವರ ಕುಟುಂಬದ ಮೂಲಗಳು ಹೇಳಿರುವುದು ಹಾಗೂ ಅವರ ನಿಧನದ ನಂತರ ದುಬೈನಲ್ಲಿ ವಿಧಿವಿಜ್ಞಾನ ಪ್ರಯೋಗದ ಅಧಿಕಾರಿಗಳು ರಕ್ತ ಮತ್ತು ಅಂಗಾಂಗ ಪರೀಕ್ಷೆಗಳನ್ನು ನಡೆಸಿರುವುದು ಈ ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ತಮ್ಮ ಸೋದರ ಸಂಬಂಧಿ ವಿವಾಹಕ್ಕೆ ದುಬೈಗೆ ತೆರಳುವ ಮುನ್ನ ಅಭಿನೇತ್ರಿ ಉತ್ತಮ ಆರೋಗ್ಯ ಹೊಂದಿದ್ದರು. ಅವರಲ್ಲಿ ಯಾವುದೇ ಕಿಂಚಿತ್ತೂ ಅನಾರೋಗ್ಯ ಇರಲಿಲ್ಲ. ದುಬೈನ ಪ್ರತಿಷ್ಠಿತ ಜುಮೇರಾಹ್ ಎಮಿರೇಟ್ಸ್ ಟವರ್ ಹೋಟೆಲ್‍ನಲ್ಲಿ ಇದ್ದ ಅವರು ಎರಡು ದಿನಗಳು ಕೋಣೆಯಲ್ಲೇ ಉಳಿದಿದ್ದರು. ಅವರ ಅನಾರೋಗ್ಯದ ಬಗ್ಗೆ ಯಾವುದೇ ವರದಿಗಳು ಇರಲಿಲ್ಲ.

ಅವರ ಪತಿ ಬೋನಿ ಕಪೂರ್ ಶನಿವಾರ ರಾತ್ರಿ ದುಬೈನಲ್ಲಿ ಶಾಪಿಂಗ್ ಮತ್ತು ಡಿನ್ನರ್‍ಗೆ ಕರೆದೊಯ್ಯುವುದಾಗಿ ಶ್ರೀದೇವಿ ಅವರಿಗೆ ತಿಳಿಸಿದ್ದರು. ಆದರೆ ಅವರು ಶೌಚಾಲಯಕ್ಕೆ ಹೋಗಿ ಕೆಲಕಾಲ ಹಿಂದುರುಗದೇ ಇದುದ್ದರಿಂದ ಅನುಮಾನಗೊಂಡ ಬೋನಿ ಕಪೂರ್ ಬಾಗಿಲನ್ನು ಮುರಿದು ಒಳಗೆ ನೋಡಿದಾಗ ನೀರು ತುಂಬಿದ ಬಾತ್ ಟಬ್‍ನಲ್ಲಿ ಶ್ರೀದೇವಿ ಪ್ರಜ್ಞಾಶೂನ್ಯರಾಗಿ ಚಲನೆ ಇಲ್ಲದೆ ಇರುವುದು ಪತ್ತೆಯಾಯಿತು.  ತಕ್ಷಣ ಹೋಟೆಲ್ ಪರಿಚಾರಕರ ನೆರವಿನೊಂದಿಗೆ ಆಸ್ಪತ್ರೆಗೆ ಕರೆದೊಯ್ದಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ದುಬೈನ ಪ್ರಸಿದ್ಧ ಖಲೀಜ್ ಟೈಮ್ಸ್ ವರದಿ ಮಾಡಿದೆ. ಶ್ರೀದೇವಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಯೇ, ಅಥವಾ ಇದಕ್ಕೆ ಬೇರೆ ಕಾರಣಗಳಿವೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಮಧ್ಯೆ ದುಬೈನ ವಿಧಿವಿಜ್ಞಾನ ಪ್ರಯೋಗಾಲಯಗಳು ಶ್ರೀದೇವಿಯವರ ರಕ್ತ ಮತ್ತು ಅಂಗಾಂಗಳ ಪರೀಕ್ಷೆ ನಡೆಸಿದ್ದು ಅದರ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಮುಳುವಾದ ಪ್ಲಾಸ್ಟಿಕ್ ಸರ್ಜರಿ?
ಇನ್ನೊಂದು ಮೂಲಗಳ ಪ್ರಕಾರ ಶ್ರೀದೇವಿಯವರು ಹೃದಯಾಘಾತದಿಂದ ಮೃತಪಟ್ಟಿಲ್ಲ. ಆದರೆ ತಮ್ಮ ಸೌಂದರ್ಯ ವರ್ಧನೆಗಾಗಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದ ಅವರು ಅದರ ಅಡ್ಡ ಪರಿಣಾಮಗಳಿಂದ ಸಾವನ್ನಪ್ಪಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.

Facebook Comments

Sri Raghav

Admin