ಶ್ರೀನಗರದ ಬುಧಗಾಮ್‍ನಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಲಷ್ಕರ್ ಉಗ್ರನ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Encounter

ಶ್ರೀನಗರ,ಜ.6- ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಬುಧಗಾಮ್‍ನಲ್ಲಿ ಲಷ್ಕರಿ-ಇ-ತೊಯ್ಬಾ ಸಂಘಟನೆಯ ಕುಖ್ಯಾತ ಕಮ್ಯಾಂಡೆರ್ ಮುಜಾಫರ್ ನಾಯಕ್‍ನನ್ನು ಭದ್ರತಾ ಸಿಬ್ಬಂದಿಗಳು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿರುವ ಘಟನೆ ಇಂದು ನಡೆದಿದೆ. ಶ್ರೀನಗರ ಹೊರ ವಲಯದ ಮೊಕ್ಕಾಂನಲ್ಲಿ ಭದ್ರತಾ ಸಿಬ್ಬಂದಿಗಳು ಹಾಗೂ ಉಗ್ರ ಕಮ್ಯಾಂಡೆರ್ ಮುಜಾಫರ್ ನಾಯಕ್ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕಮ್ಯಾಂಡೆರ್‍ನನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಇಲ್ಲಿನ ಮನೆಯೊಂದರಲ್ಲಿ ಕಮ್ಯಾಂಡೆರ್ ಮುಜಾಫರ್ ಅಡಗಿಕೊಂಡಿದ್ದು, ಈ ವಿಷಯ ತಿಳಿದು ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮನೆ ಸುತ್ತುವರೆದು ಮಿಂಚಿನ ಕಾರ್ಯಾಚರಣೆ ನಡೆಸಿದರು.

ಈ ವೇಳೆ ಮುಜಾಫರ್ ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ಸುರಿಮಳೆಗೈದಾಗ ಇದಕ್ಕೆ ತೀವ್ರ ಪ್ರತಿರೋಧ ನೀಡಿದ ಯೋಧರು ಉಗ್ರರನನ್ನು ಹತ ಮಾಡಿದ್ದಾರೆ. 8 ವರ್ಷಗಳಿಂದ ಉತ್ತರ ಕಾಶ್ಮೀರದಲ್ಲಿ ಮುಜಾಫರ್ ಕಾರ್ಯ ಚಟುವಟಿಕೆ ನಡೆಸಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದನು, ಅಲ್ಲದೆ, ಹಲವು ದಾಳಿಗಳನ್ನು ನಡೆಸಿದ್ದನು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin