ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Farooq-Abdullah

ಶ್ರೀನಗರ, ಏ.15- ವ್ಯಾಪಕ ಹಿಂಸಾಚಾರ ಮತ್ತು ಗೋಲಿಬಾರ್‍ನಿಂದ ಎಂಟು ಜನ ಬಲಿಯಾದ ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫೆರನ್ಸ್ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಡಾ. ಫಾರೂಕ್ ಅಬ್ದುಲ್ಲಾ ವಿಜಯಿಯಾಗಿದ್ದಾರೆ. ಈ ಉಪ ಚುನಾವಣೆಯ ಮತದಾನದ ವೇಳೆ ಘರ್ಷಣೆ ಮತ್ತು ಹಿಂಸಾಚಾರ ಭುಗಿಲೆದ್ದ ಕಾರಣ ಶೇ.7ರಷ್ಟು ಮಾತ್ರ ಮತ ಚಲಾವಣೆಯಾಗಿತ್ತು.

ಗುರುವಾರ ನಡೆದ ಮರು ಮತದಾನದಲ್ಲಿ ಶೇ.2ರಷ್ಟು ಮತದಾರರು ಮಾತ್ರ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದರು. ಇಂದು ನಡೆದ ಎಣಿಕೆಯಲ್ಲಿ ಆರಂಭದಿಂದಲೂ ತಮ್ಮ ಪ್ರತಿಸ್ಪರ್ಧಿ ಆಡಳಿತರೂಢ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ(ಪಿಡಿಪಿ) ಅಭ್ಯರ್ಥಿ ನಾಸಿರ್ ಅಹಮದ್ ಖಾನ್‍ಗಿಂತಲೂ ಮುನ್ನಡೆ ಸಾಧಿಸಿದ ಮಾಜಿ ಮುಖ್ಯಮಂತ್ರಿ ಅಬುಲ್ಲಾ ಗೆಲುವು ಸಾಧಿಸಿದರು.

ಒಟ್ಟು ಒಂಭತ್ತು ಅಭ್ಯರ್ಥಿಗಳು ಕಣದಲ್ಲಿದ್ದರೂ ಅಬುಲ್ಲಾ ಮತ್ತು ಖಾನ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು.  ಮತ ಎಣಿಕೆ ಕೇಂದ್ರದೊಳಗೆ ಪತ್ರಕರ್ತರಿಗೆ ಅವಕಾಶ ನಿರಾಕರಿಸಲಾಗಿತ್ತು. ಫಲಿತಾಂಶ ವರದಿ ಮಾಡಲು ಬಂದಿದ್ದ ಮಾಧ್ಯಮ ಪ್ರತಿನಿಧಿಗಳು ಹೊರಗೆ ಕಾಯಬೇಕಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin