ಶ್ರೀನಿವಾಸ್ ಪ್ರಸಾದ್ ಪರ ವಿ.ಸೋಮಣ್ಣ , ಕೇಶವಮೂರ್ತಿಪರ ಸತೀಶ್ ಜಾರಕಿಹೋಳಿ ಮತಯಾಚನೆ

ಈ ಸುದ್ದಿಯನ್ನು ಶೇರ್ ಮಾಡಿ

Srinivas-Prasad--01

ನಂಜನಗೂಡು, ಮಾ.22- ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬಿಜೆಪಿ ಯ ಅಲೆ ಎದ್ದಿದ್ದು, ಎಲ್ಲಾ ವರ್ಗದ ಜನರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಗೆ ಮತ ಹಾಕಲು ಸನ್ನದ್ಧರಾಗಿದ್ದು ಅತ್ಯಧಿಕ ಮತಗಳ ಅಂತರದಿಂದ ಪಕ್ಷ ಗೆಲುವು ಸಾಧಿಸಲಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ .   ಅವರು ಕಳಲೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುದ್ದಳ್ಳಿ, ನವಿಲೂರು, ಹೊಸಪುರ, ಸೂರಳ್ಳಿ, ಲಕ್ಷ್ಮಣಾಪುರ ಸಿದ್ದಯ್ಯನಹುಂಡಿ, ಕೂಗಲೂರು, ಕೃಷ್ಣಾಪುರ, ಕಸುವಿನಹಳ್ಳಿ, ಮಾಕನಪುರ, ಎಳಚೆಗೆರೆ, ಸಿಂದುವಳ್ಳಿಪುರ, ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಪರ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿ.ಶ್ರೀನಿವಾಸ್ ಪ್ರಸಾದ್ ಸ್ವಾಭಿಮಾನಿ ರಾಜಕಾರಿಣಿ ಪ್ರಮಾಣಿಕರು, ಇವರನ್ನು ಸಂಪುಟದಿಂದ ಕೈ ಬಿಡುವ ಮೂಲಕ ಅವಮಾನಿಸಿದ್ದಾರೆ. ಇದರಿಂದ ಈ ಭಾಗದ ಜನತೆಗೆ ನೋವುಂಟಾಗಿದ್ದು, ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.  ಇದೇ ಸಂದರ್ಭದಲ್ಲಿ ವಿವಿಧ ಪಕ್ಷದಿಂದ ಅನೇಕ ಮುಖಂಡರು ವಿ.ಸೋಮಣ್ಣ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.   ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಎಸ್.ಮಹದೇವಯ್ಯ, ಆಶೋಕ್, ಕೆ.ಕೆ.ಜಯದೇವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಕುಂಬ್ರಳ್ಳಿ ಸುಬ್ಬಣ್ಣ, ಹರ್ಷವರ್ಧನ್, ಮಾಜಿ ಜಿ.ಪಂ.ಅಧ್ಯಕ್ಷ ಬಿ.ಎಂ. ರಾಮು, ರಾಜ್ಯ ಎಸ್‍ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ, ದೇವಿರಮ್ಮನಹಳ್ಳಿ ಜಿ. ಬಸವರಾಜು, ಹೊಸಪುರ ಜಗದೀಶ್ ಇದ್ದರು.

ಕಳಲೆ ಕೇಶವಮೂರ್ತಿ ಪರ ಜಾರಕಿಹೋಳಿ ಮತಯಾಚನೆ  : 

ನಂಜನಗೂಡು, ಮಾ.22- ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರ ಮಾಜಿ ಸಚಿವ ಸತೀಶ್ ಜಾರಕಿಹೋಳಿ ತಾಲೂಕಿನ ದೇಬೂರು, ಬೆಳಲೆ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಳಲೆ ಕೇಶವಮೂರ್ತಿರವರು ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ಜನಸಾಮಾನ್ಯರ ಜೊತೆಯಿದ್ದು ಅವರ ಕೆಲಸಗಳನ್ನು ಮಾಡಿಕೊಡುವುದರಿಂದ ಜನರು ಅವರನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 4 ವರ್ಷಗಳ ಸರ್ಕಾರದ ಅಭಿವೃದ್ಧಿ ಸಾಧನೆಗಳು ಅಪಾರ. ಕ್ಷೇತ್ರಕ್ಕೆ ಕಳೆದ 6 ತಿಂಗಳಿನಿಂದ ಅನುದಾನ ಹರಿದುಬಂದಿದ್ದು ಗ್ರಾಮೀಣ ಭಾಗದಲ್ಲಿ ಅಭಿವೃದ್ದಿ ಪರ್ವ ಎದ್ದು ಕಾಣುತ್ತಿದೆ. ಈ ಎಲ್ಲಾ ಕಾರ್ಯಗಳಿಂದ ಪಕ್ಷದ ಅಭ್ಯರ್ಥಿ ಸುಲಭವಾಗಿ ಜಯಗಳಿಸಲಿದ್ದಾರೆ ಎಂದರಲ್ಲದೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಸಹ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಚ್.ಸಿ.ಬಸವರಾಜು, ಮಾಜಿ ತಾಪಂ ಅಧ್ಯಕ್ಷರಾದ ಚಾಮರಾಜು, ತಮ್ಮಣ್ಣೇಗೌಡ, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ಎಪಿಎಂಸಿ ಅಧ್ಯಕ್ಷ ಮಾದಪ್ಪ, ಪುರಸಭಾ ಮಾಜಿ ಅಧ್ಯಕ್ಷೆ ಗಾಯತ್ರಿ, ದೇಬೂರು ಗ್ರಾಪಂ ಅಧ್ಯಕ್ಷೆ ಜಯಮ್ಮ, ಸೇರಿದಂತೆ ಹಲವಾರು ಪ್ರಮುಖರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin