‘ ಶ್ರೀನಿವಾಸ್ ಪ್ರಸಾದ್ ಸಚಿವರಾಗಿದ್ದಾಗ ಅವರನ್ನು ಟೀಕಿಸಿ, ಈಗ ಅವರ ಪರವಾಗಿಯೇ ಪ್ರಚಾರ ಮಾಡುತ್ತಿದ್ದಾರೆ’

ಈ ಸುದ್ದಿಯನ್ನು ಶೇರ್ ಮಾಡಿ

basavaraj--reddy

ಮೈಸೂರು, ಏ.6- ಶ್ರೀನಿವಾಸ್ ಪ್ರಸಾದ್ ಕಂದಾಯ ಸಚಿವರಾಗಿದ್ದಾಗ ಏನೂ ಕೆಲಸ ಮಾಡುತ್ತಿಲ್ಲ ಎಂದು ಟೀಕಿಸುತ್ತಿದ್ದವರೇ ಇಂದು ಅವರನ್ನು ಚುನಾವಣಾ ಕಣಕ್ಕೆ ಇಳಿಸಿ ಮತ ಯಾಚಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಇಂದಿಲ್ಲಿ ಛೇಡಿಸಿದರು.   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ಹಿಂದೆ ಸದನದಲ್ಲಿ ಶ್ರೀನಿವಾಸ್ ಪ್ರಸಾದ್ ಶಾಸಕನಾಗಿ, ಸಚಿವನಾಗಿ ಏನೂ ಕೆಲಸ ಮಾಡುತ್ತಿಲ್ಲ. ಅನಾರೋಗ್ಯಕ್ಕೀಡಾಗಿದ್ದಾರೆ. ಅವರೊಬ್ಬ ಅದಕ್ಷ ಮಂತ್ರಿ ಇಂಥವರನ್ನು ಸಂಪುಟದಲ್ಲಿ ಏತಕ್ಕೆ ಇಟ್ಟುಕೊಂಡಿದ್ದೀರಾ ಎಂದು ಸದನದಲ್ಲಿ ಟೀಕಿಸಿದ್ದರು. ಹೊರಗೆ ಬಿ.ಎಸ್.ಯಡಿಯೂರಪ್ಪ ಅವರು ಪ್ರಸಾದ್ ವಿರುದ್ಧ ಮಾತನಾಡಿದ್ದರು ಎಂದು ಹೇಳಿದರು.

ಶ್ರೀನಿವಾಸಪ್ರಸಾದ್ ಅನಾರೋಗ್ಯ ಪೀಡಿತರೇ, ಓಡಾಡಲು ಸಾಧ್ಯವಿಲ್ಲ. ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡು ಚುನಾವಣಾ ಕಣಕ್ಕೆ ಇಳಿಸಿ ಮತ ಕೇಳುತ್ತಿರುವ ಯಡಿಯೂರಪ್ಪನವರಿಗೆ ಬುದ್ದಿಯಿದೆಯಾ? ಎಂದು ಪ್ರಶ್ನಿಸಿದರು.   ಸರ್ಕಾರ ಸಾರ್ವಜನಿಕರ ತೆರಿಗೆ ಹಣದಲ್ಲಿ ಚುನಾವಣೆ ನಡೆಸುತ್ತಿದೆ. ಇದಕ್ಕೆ ಕಾರಣ ಬಿಜೆಪಿಯವರೇ. ಬಿಜೆಪಿಯವರು ಶ್ರೀನಿವಾಸ್ ಪ್ರಸಾದ್‍ರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಚುನಾವಣೆ ಆಗುತ್ತಿರಲಿಲ್ಲ. ಬಿಜೆಪಿಯವರು ಸಹ ಚುನಾವಣೆಗೆ ನೇರ ಹೊಣೆಯಾಗಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪನವರನ್ನು ನೋಡಿ ಕ್ಷೇತ್ರದಲ್ಲಿ ಯಾರೂ ಮತ ಹಾಕೊಲ್ಲ. ನಾನು ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ದಲಿತರು ಶ್ರೀವಾಸ್‍ಪ್ರಸಾದ್ ವಿರುದ್ದ ಇದ್ದಾರೆ. ವೀರಶೈವರು ಸಹ ಪ್ರಜ್ಞಾವಂತರೆ. ಯಡಿಯೂರಪ್ಪನನ್ನು ನೋಡಿ ಮತ ಹಾಕೊಲ್ಲ. ತನ್ನನ್ನು ನೋಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂಬ ಭ್ರಮೆಯಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ಲೇವಡಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin