‘ಶ್ರೀಮಂತ ಮಠಗಳಿಗೆ ಹಣ ಕೊಡುವುದಿಲ್ಲ’ : ಈಶ್ವರಪ್ಪಗೆ ಆಂಜನೇಯ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-Anjaneya

ಕಲಬುರಗಿ, ಜ.23- ಬಡ ಮತ್ತು ಸಾಮಾಜಿಕ ಕಳಕಳಿಯುಳ್ಳ ಮಠಗಳಿಗೆ ಮಾತ್ರ ನಮ್ಮ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಶ್ರೀಮಂತ ಮಠಗಳಿಗೆ ಹಣ ಕೊಡುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮೇಲ್ಮನೆ ಪ್ರತಿಪಕ್ಷದ ನಾಯಕ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಸರ್ಕಾರದ ಹಣವೇನು ಬಿಟ್ಟಿಯಲ್ಲ, ಅದು ಜನರ ತೆರಿಗೆಯ ಹಣ. ಬೇಕಾಬಿಟ್ಟಿ ಖರ್ಚು ಮಾಡಲು ಸಾಧ್ಯವಿಲ್ಲ. ಮಠ-ಮಾನ್ಯಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಈಶ್ವರಪ್ಪ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಶ್ರೀಮಂತ ಮಠಗಳಿಗೆ ನಾವು ಅನುದಾನ ಕೊಡುವುದಿಲ್ಲ. ಅಂತಹ ಮಠಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರೇ ಕಾಣಿಕೆ ನೀಡುತ್ತಾರೆ. ನಮ್ಮದೇನಿದ್ದರೂ ಬಡ ಮತ್ತು ಸಾಮಾಜಿಕ ಕಳಕಳಿಯುಳ್ಳ ಮಠಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತೇವೆ ಎಂದರು.

ಈಶ್ವರಪ್ಪನವರು ಏನಾದರೂ ಹೇಳಿಕೊಳ್ಳಲು ಡೋಂಟ್‍ಕೇರ್ ಎಂದು ಆಂಜನೇಯ ಹೇಳಿದರು. ಮುಂಬರುವ ಚುನಾವಣೆ ಸಿದ್ದರಾಮಯ್ಯನವರ ನೇತೃತ್ವದಲ್ಲೇ ಎದುರಿಸುತ್ತೇವೆ. ಚುನಾವಣೆ ನಂತರ ದಲಿತ ಸಿಎಂ ಆಯ್ಕೆ ವಿಚಾರ ಚರ್ಚೆ ಮಾಡೋಣ. ನಮ್ಮದು ಸಾಮೂಹಿಕ ನಾಯಕತ್ವ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin