ಶ್ರೀಮಲೈಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಶಿವರಾತ್ರಿ-ಯುಗಾದಿ ಜಾತ್ರೆಗೆ ಸಕಲ ಸಿದ್ಧತೆ  

ಈ ಸುದ್ದಿಯನ್ನು ಶೇರ್ ಮಾಡಿ

KOLEGALA
ಕೊಳ್ಳೇಗಾಲ, ಪೆ.17- ತಾಲ್ಲೂಕಿನ ಪ್ರಸಿದ್ಧ ಶ್ರೀಮಲೈಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಇದೇ 23 ರಿಂದ 27ರ ವರೆಗೆ ಮಹಾಶಿವರಾತ್ರಿ ಮತ್ತು ಮಾರ್ಚ್ 25 ರಿಂದ 29ರ ವರೆಗೆ ಯುಗಾದಿ ಜಾತ್ರೆ ನಡೆಯಲಿದ್ದು ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ರಾಮು ಅಧಿಕಾರಿಗಳಿಗೆ ಸೂಚಿಸಿದರು.  ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಜಾತ್ರೆ ಪ್ರಯುಕ್ತ ಮ.ಮ.ಬೆಟ್ಟ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಪೂರ್ವಸಿದ್ಧ್ಧತಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಸಂಬಂಧಪಟ್ಟ ಅಧಿಕಾರಿಗಳು ಜಾತ್ರಾ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದು ಶಿವರಾತ್ರಿ ಮತ್ತು ಯುಗಾದಿ ಸಂದರ್ಭದಲ್ಲಿ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೇವೆ ನೀಡಬೇಕು ಎಂದರು.
ಜಾತ್ರೆರಯಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಸ್ನಾನ ಹಾಗೂ ಶೌಚಾಲಯ ಸೌಲಭ್ಯ, ವಾಹನಗಳ ಪಾರ್ಕಿಂಗ್, ಭಕ್ತರಿಗೆ ದಾಸೋಹ ವ್ಯವಸ್ಥೆ, ಜಾತ್ರಾ ಆವರಣ ಸ್ವಚ್ಛತೆಯ ನಿರ್ವಹಣೆ, ವಿದ್ಯುತ್ ದೀಪಾಲಂಕಾರ ವ್ಯವಸ್ಥೆ, ಸಾಂಸ್ಕೃತಿಕ  ಕಾರ್ಯಕ್ರಮ ಸೇರಿದಂತೆ ಇನ್ನೂ ಹಲವಾರು ಕಾರ್ಯಗಳನ್ನು ಕಐಗೊಳ್ಳುವಂತೆ ಸೂಚಿಸಿದರು.

ಅಬಕಾರಿ ಇಲಾಖಾ ಸಿಬ್ಬಂದಿ ಬೆಟ್ಟಕ್ಕೆ ಬರುವ ತಮಿಳುನಾಡು ಹಾಗೂ ಕರ್ನಾಟಕ ಹೆದ್ದಾರಿಗಳಲ್ಲಿ ಮಧ್ಯ ಸಾಗಾಣೆ ಪರಿಶೀಲಿಸಬೇಕು. ಮಧ್ಯ ಸೇವಿಸಿ ವಾಹನಚಾಲನೆ ತಡೆಯಲು ಯಂತ್ರಗಳನ್ನು ಖರೀದಿ ಮಾಡಲು ದೇವಾಲಯದ ಆಡಳಿತ ಮಂಡಳಿಗೆ ಸೂಚಿಸಿದರು. ಖಾಸಗಿ ವಾಹನಗಳ ತಡೆಯುವ ಪ್ರಯತ್ನವನ್ನು ಆರ್‍ಟಿಒ ಇಲಾಖಾ ಸಿಬ್ಬಂದಿಗಳು ಮಾಡಬೇಕು ಎಂದು ಆದೇಶಿಸಿದರು.  ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಮಾತನಾಡಿ, ಕಾಡಂಚಿನಲ್ಲಿ ಭಕ್ತರು ಸೌದೆ ಬಳಸಿ ಅಡುಗೆ ಮಾಡಲು ಹಾಗೂ ಭಕ್ತಾಧಿಗಳ ಆರೋಗ್ಯ ತಪಾಸಣೆಗೆ ಸ್ಥಳದಲ್ಲೇ ವೈದ್ಯಾಧಿಕಾರಿಗಳು ಹಾಗೂ 108 ವಾಹನ ನೇಮಸಬೇಕು ಎಂದು ತಾಲ್ಲೂಕು ಆರೋಗ್ಯಧಿಕಾರಿಗೆ ತಿಳಿಸಿದರು.ಕೆಟ್ಟಿರುವ ಸಿಸಿ ಕ್ಯಾಮಾರಗಳನ್ನು ಶೀಘ್ರದಲ್ಲಿ ಸರಿಪಡಿಸಿ ಯಾವುದೇ ಆಚಾರ್ತುಯ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.ಸಾಲೂರು ಮಠದ ಪಟ್ಟದಗುರುಸ್ವಾಮಿ, ಅಪಾರ ಜಿಲ್ಲಾಧಿಕಾರಿ ಭಾರತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜುಗೌಡ, ಜಿ.ಪಂ ಸದಸ್ಯರಾದ ಇರ್ಷದ್‍ಬಾನು, ಶಿವಮ್ಮಕೃಷ್ಣ, ಲೇಖಾರವೀಂದ್ರ, ತಾ.ಪಂ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾರಾಜಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್, ಕೊಳ್ಳೇಗಾಲ ತಹಶೀಲ್ದಾರ್ ಕಾಮಾಕ್ಷಮ್ಮ, ಹನೂರು ವಿಶೇಷ ತಹಶೀಲ್ದಾರ್ ಮಹೇಶ್ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin