ಶ್ರೀರಾಮುಲು ವಿರುದ್ಧವೇ ಕಾನೂನು ಸಮರಕ್ಕಿಳಿದ ಕರುಣಾಕರರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Sriramulu-vs-Karunakara-red

ಬಳ್ಳಾರಿ, ಫೆ.18- ಒಂದೇ ಮನೆಯ ಸೋದರರಂತಿದ್ದ ಕರುಣಾಕರರೆಡ್ಡಿ, ಶ್ರೀರಾಮುಲು ಈಗ ಪರಸ್ಪರ ಕಾನೂನು ಸಮರಕ್ಕಿಳಿದಿದ್ದಾರೆ. ನಿವೇಶನವೊಂದರ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕರುಣಾಕರರೆಡ್ಡಿ ಅವರು ಸಂಸದ ಶ್ರೀರಾಮುಲು ವಿರುದ್ಧ ಬರೋಬ್ಬರಿ 10 ದಾವೆಗಳನ್ನು ಹೂಡಿದ್ದಾರೆ. ಬಳ್ಳಾರಿಯ ಸುಷ್ಮಾಸ್ವರಾಜ್ ನಗರದ ನಿವೇಶನವೊಂದರ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಕರುಣಾಕರರೆಡ್ಡಿ ಅವರು ಶ್ರೀರಾಮುಲು, ತಿಮ್ಮರಾಜು, ರಾಘವೇಂದ್ರ ಅವರ ಮೇಲೆ ಒಟ್ಟು 10 ದಾವೆಗಳನ್ನು ಹೂಡಿರುವುದು ಕುತೂಹಲ ಕೆರಳಿಸಿದೆ.

ಶ್ರೀರಾಮುಲು ಅವರು ಜನಾರ್ಧನರೆಡ್ಡಿ ಅವರ ಜೀವದ ಗೆಳೆಯ. ಇತ್ತೀಚೆಗೆ ಜನಾರ್ಧನರೆಡ್ಡಿ ತನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದಾಗ ಕರುಣಾಕರರೆಡ್ಡಿ ಬಾಗಿಯಾಗದೆ ದೂರವೇ ಉಳಿದಿದ್ದರು.   ಆದರೆ, ಶ್ರೀರಾಮುಲು ಮುಂದೆ ನಿಂತು ಎಲ್ಲವನ್ನೂ ನಿರ್ವಹಿಸಿದ್ದರು. ಮದುವೆಯ ಕೊನೆಯಲ್ಲಿ ಶ್ರೀರಾಮುಲು ಅವರನ್ನು ಜನಾರ್ಧನರೆಡ್ಡಿ ಪರಿಚಯ ಮಾಡಿಕೊಟ್ಟು ಜತೆಗೆ ಇದ್ದ ಸಹೋದರರಿಗಿಂತ ಹೆಚ್ಚಾಗಿ ನನ್ನೊಂದಿಗೆ ಶ್ರೀರಾಮುಲು ಇದ್ದಾರೆ ಎಂದು ಹೇಳಿದ್ದರು.  ಕರುಣಾಕರರೆಡ್ಡಿ ಮತ್ತು ಜನಾರ್ಧನರೆಡ್ಡಿ ನಡುವಿನ ಸಂಬಂಧ ಹಳಸಿ ಬಹಳ ದಿನವಾಗಿತ್ತು. ತಮ್ಮ ಆಡಳಿತವಿದ್ದಾಗ ಹಗರಿ ಬಳಿ ಕೃಷಿ ಭೂಮಿಯನ್ನು ಖರೀದಿಸಿ ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲಾಗಿತ್ತು. ಈ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದಾವೆ ಹೂಡಿದ್ದಾರೆ.

ಈಗ ಶ್ರೀರಾಮುಲು ಅವರು ಅದನ್ನು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕರುಣಾಕರರೆಡ್ಡಿ ದಾವೆ ಹೂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin