ಶ್ರೀಲಂಕಾ ಪ್ರವಾಸ ರದ್ದುಗೊಳಿಸಿದ ರಜನಿಕಾಂತ್

ಈ ಸುದ್ದಿಯನ್ನು ಶೇರ್ ಮಾಡಿ

Rajni-n

ಚೆನ್ನೈ , ಮಾ. 26– ತಮಿಳು ಸಂಘಟನೆಗಳ ಮನವಿಯ ಮೇರೆಗೆ ತಮ್ಮ ಶ್ರೀಲಂಕಾ ಪ್ರವಾಸವನ್ನು ರದ್ದುಗೊಳಿಸಿದ್ದೇನೆ ಎಂದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ವಿಸಿಕೆ ಸಂಘಟನೆಯ ಮುಖ್ಯಸ್ಥ ತಿರುಮವಾಲನ್ ಹಾಗೂ ಎಂಡಿಎಂಕೆ ನಾಯಕ ವೈಕೋರವರ ಮನವಿ ಮೇರೆಗೆ ನಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಇದಕ್ಕೆ ಅವರಿಬ್ಬರೊಂದಿಗೆ ನನಗೆ ಇರುವ ಉತ್ತಮ ಬಾಂಧವ್ಯವೇ ಕಾರಣ ಎಂದು ರಜನಿ ತಿಳಿಸಿದ್ದಾರೆ.

ಏಪ್ರಿಲ್ 9 ರಂದು ಶ್ರೀಲಂಕಾದಲ್ಲಿ ಜ್ಞಾನಂ ಫೌಂಡೇಷನ್ ವತಿಯಿಂದ 150 ಮನೆಗಳನ್ನು ನಿರ್ಮಿಸಿದ್ದು ಇದರ ಲೋಕಾರ್ಪಣೆಗಾಗಿ ರಜನಿ ಅವರನ್ನು ಆಮಂತ್ರಿಸಲಾಗಿತ್ತು. ಆದರೆ ತಮಿಳರು ವಾಸವಿದ್ದ ಮನೆಗಳನ್ನು ಕೆಡವಿ ಅಲ್ಲಿ ನೂತನವಾಗಿ ಮನೆಗಳನ್ನು ನಿರ್ಮಿಸಿರುವುದರಿಂದ ಇದರ ಬಿಡುಗಡೆಗೆ ರಜನಿ ಅವರು ಹೋಗಬಾರದೆಂದು ವಿಸಿಕೆಯ ವಿದುತಾಲಾಲ್ ಚಿರುತೈಂಗಾಲ್ ಕಾಟಿ ಹಾಗೂ ಡಿಎಂಡಿಕೆಯ ಮರುಮಾರ್‍ಲಾರ್ಚಿ ದ್ರಾವಿಡ ಮುನ್ನೇತ್ರಾ ಕಾಂಜಿಮ್ ಅವರು ಕೂಡ ವಿರೋಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin