ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸತ್ಯ ಶುದ್ಧ ಕಾಯಕ

ಈ ಸುದ್ದಿಯನ್ನು ಶೇರ್ ಮಾಡಿ

9

ರಾಮದುರ್ಗ,ಸೆ.29- ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಳೆದ 25 ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಮೇಲೆತ್ತುವ ಹಾಗೂ ಸತ್ಯ ಶುದ್ಧ ಕಾಯಕ ಮಾಡುವ ಮೂಲಕ ಜನಮನ್ನಣೆ ಗಳಿಸಿ ಕೊಳ್ಳುತ್ತಿದೆ ಎಂದು ಜಿಲ್ಲಾ ಜನಜಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಮಗದುಮ್ಮ ಹೇಳಿದರು.ಸ್ಥಳೀಯ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗೋಕಾಕ, ಸವದತ್ತಿ, ಬೈಲಹೊಂಗಲ, ರಾಯಬಾಗ ಹಾಗೂ ರಾಮದುರ್ಗ ತಾಲೂಕು ಕೇಂದ್ರಗಳಲ್ಲಿ ಅ. 2ರಂದು ಗಾಂಧೀ ಜಯಂತಿಯಂದು ಸಾಮೂಹಿಕ ಜಾಗೃತಿ ಜಾಥಾ ನಡೆಸಲಾಗುವುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ 2 ವಿಭಾಗಗಳನ್ನು ಮಾಡಿಕೊಂಡು ಜನಜಾಗೃತಿ ವೇದಿಕೆಯ ಮೂಲಕ 17 ಮಧ್ಯವರ್ಜನ ಶಿಬಿರಗಳನ್ನು ನಡೆಸಲಾಗಿದ್ದು, 1590 ಮದ್ಯಪಾನಿ ಗಳು ಭಾಗವಹಿಸಿದ್ದರು. ಅವರಲ್ಲಿ 1075 ಜನರು ಸಂಪೂರ್ಣ ಮಧ್ಯಪಾನ ದಿಂದ ಮುಕ್ತರಾಗಿ ನವಜೀವನ ನಡೆಸುತ್ತಿದ್ದಾರೆಂದು ಸಂತಸದಿಂದ ಹೇಳಿದರು.

ಮದ್ಯಪಾನದಿಂದ ಮುಕ್ತರಾಗಿ ನವಜೀವನ ನಡೆಸುತ್ತಿರುವವರಿಗೆ ವಿಶೇಷ ಬೋದನೆ ನೀಡಲು 825 ನವಜೀವನ ಸಮಿತಿ ಸಭೆ ನಡೆಸಲಾಗಿದೆ. 10 ಪಾನ ಮುಕ್ತರ ಸಮಾವೇಶ, 14 ಸುಭಿಕ್ಷಾ ಭಜನಾ ಕಾರ್ಯಕ್ರಮ, 05 ಹಕ್ಕೊತ್ತಾಯ ಕಾರ್ಯಕ್ರಮ, 156 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸಿದ್ದು, 21066 ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿದ್ದಾರೆಂದು ಅವರು ತಿಳಿಸಿದರು.ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿ ಒಂದು ಗಂಟೆಯಲ್ಲಿ ರಾಜ್ಯದಲ್ಲಿ ಮದ್ಯಮಾರಾಟ ಸಂಪೂರ್ಣ ನಿಷೇದ ಮಾಡಿರುವುದು ಮೆಚ್ಚುವಂತದ್ದು. ಆದರೆ ರಾಜ್ಯ ಸರಕಾರ 1471 ಹೊಸ ಮದ್ಯದಂಗಡಿಗೆ ಪರವಾಣಿಗೆ ನೀಡಲು ಹೊರಟಿರುವುದು ಖೇದಕರ ಸಂಗತಿಯಾಗಿದೆ. ಆದರೆ ಜನಜಾಗೃತಿ ವೇದಿಕೆಯು ಯಾವ ಕಾಲಕ್ಕೂ ಹೊಸ ಮದ್ಯದಂಗಡಿ ತೆರೆಯಲು ಬಡುವದಿಲ್ಲವೆಂದು ಅವರು ಹೇಳಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸುರೇಶ ಮ್ಯೊಲಿ, ತಾಲೂಕು ಯೋಜನಾಕಾರಿ ಸತೀಶ ಎಂ, ಜನಜಗೃತಿ ಸಮಿತಿಯ ಅಶೋಕ ಕುಲಗೋಡ, ಜಿ.ಬಿ.ರಂಗನಗೌಡ್ರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತ ರಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin