ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಗೌರಿಗಣೇಶನಿಗೆ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ganesha--bettahalli

ಹನೂರು, ಅ.6- ಶ್ರೀ ಬೆಟ್ಟಳ್ಳಿ ಮಾರಮ್ಮ ಮೈಸೂರು ಮಾರಮ್ಮ (ಮಹಿಷಾಶೂರ ಮರ್ಥಿನಿ) ಆಂಜನೇಯಸ್ವಾಮಿ ಅಯ್ಯಪ್ಪಸ್ವಾಮಿ ದೇವಾಲಯಗಳಲ್ಲಿ ಗೌರಿಗಣೇಶ ಹಬ್ಬದ ಪ್ರಯುಕ್ತ ಭಕ್ತರು ವಿಶೇಷ ಪೂಜಾ ಕೈಂ ಕಾರ್ಯಗಳನ್ನು ಅದ್ದೂರಿಯಾಗಿ ನೆರವೇರಿಸಿದರು.  ಗ್ರಾಮ ದೇವತೆಗಳೆಂದು ಹೆಸರು ವಾಸಿಯಾದ ಶ್ರೀ ಬೆಟ್ಟಳ್ಳಿ ಮಾರಮ್ಮನ ಮೈಸೂರು ಮಾರಮ್ಮ(ಮಹಿಷಾಶೂರ ಮರ್ಥಿನಿ) ಆಂಜನೇಯಸ್ವಾಮಿ ಅಯ್ಯಪ್ಪಸ್ವಾಮಿ ದೇವಾಲಯಗಳಲ್ಲಿ ಬೆಳಗಿನ ಜಾವ 5ರಿಂದ ಗರ್ಭ ಗುಡಿಯೊಳಗಿರುವ ದೇವರ ವಿಗ್ರಹವನ್ನು ಶುಚಿಗೊಳಿಸಿ ಪನ್ನೀರು ಜೇನುತುಪ್ಪ ಹಾಲು ಮೊಸರು ಎಳೆನೀರು ಹಾಗೂ ಇನ್ನಿತರ ಅಭಿಷೇಕಗಳು ಜರುಗಿಸಲಾಯಿತು.

ಗರ್ಭ ಗುಡಿಯಲ್ಲಿರುವ ಅಮ್ಮನ ಮೂರ್ತಿಗೆ ನೂತನ ಉಡುಪು ಚಿನ್ನ ಬಂಗಾರದ ವಸ್ತ್ರ ಧರಿಸಿ ವಿಳ್ಯೆದೆಲೆಯ ಸರಮಾಲೆ ಸೇರಿದಂತೆ ವಿವಿಧ ಬಗೆಯ ಫಲಪುಷ್ಪಗಳಿಂದ ತಯಾರಿಸಿದ ಹಾರಗಳಿಂದ ಅಲಂಕರಿಸಲಾಯಿತು.ಹೊರಾಂಗಣದಲ್ಲಿ ಮಾವಿನಸೊಪ್ಪು, ಬಾಳೆಕಂದು ಹೂವಿನಹಾರ ತಳಿರುತೋರಣಗಳಿಂದ ಸಿಂಗಾರಿಸಿ ಪೂಜಿಸಲಾಯಿತು. ದೇವಸ್ಥಾನ ಆವರಣದಲ್ಲಿ ಇಡಲಾಗಿದ್ದ ದೊಡ್ಡಗಾತ್ರದ ಗಣೇಶನ ಮೂರ್ತಿ ಸೇರಿದಂತೆ ಪಟ್ಟಣದಲ್ಲಿ ಹತ್ತಕ್ಕೂ ಹೆಚ್ಚು ಕಡೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು ವಿಶೇಷವಾಗಿತ್ತು.ಗಣೇಶ ಮೂರ್ತಿಯನ್ನು 9-12 ದಿನ ಪೂಜೆ ಸಲ್ಲಿಸಿ ನಂತರ ವಿಸರ್ಜನೆ ಮಾಡಲಾಗುತ್ತದೆ.

 

► Follow us on –  Facebook / Twitter  / Google+

Facebook Comments

Sri Raghav

Admin