ಶ್ರೀ ಮಾಯಕ್ಕಾದೇವಿ ಜಾತ್ರೆ : ಮದ್ಯ ಮಾರಾಟ ವಿರೋಧಿಸಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

15

ರಾಯಬಾಗ,ಫೆ.14- ಶ್ರೀ ಮಾಯಕ್ಕಾದೇವಿಯ ಜಾತ್ರೆ ನಿಮಿತ್ಯ ಜಿಲ್ಲಾಧಿಕಾರಿಗಳು ಜಾತ್ರೆ ಮುಗಿಯುವವರೆಗೆ ಪಟ್ಟಣದಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದರ ವಿರುದ್ಧ ಮದ್ಯ ಅಂಗಡಿಯ ಮಾಲೀಕರು ಅಬಕಾರಿ ಆಯುಕ್ತರಿಂದ ಆದೇಶ ಪಡೆದು ಮದ್ಯ ಅಂಗಡಿ ಪ್ರಾರಂಭಿಸಿರುವುದನ್ನು ಖಂಡಿಸಿ ನಿನ್ನೆ ಚಿಂಚಲಿ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು, ತಹಶೀಲ್ದಾರ್ ಕಾರ್ಯಾಲಯದ ಶಿರಸ್ತೆದಾರ ಪರಮಾನಂದ ಮಂಗಸೂಳಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಬಕಾರಿ ಆಯುಕ್ತರ ಆದೇಶದ ನಿಯಮಾನುಸಾರ ಮದ್ಯದಂಗಡಿಗಳು ಬೆಳಿಗ್ಗೆ 10ರಿಂದ ರಾತ್ರಿ 11.30 ಗಂಟೆವರೆಗೆ ತೆರೆದಿರಬೇಕು ಹಾಗೂ ಸಿಎಲ್9 ನಿಯಮಾನುಸಾರ ಅಂಗಡಿಯಲ್ಲಿ ಊಟ ಮತ್ತು ಉಪಾಹರಕ್ಕೆ ಬಂದವರಿಗೆ ಮಾತ್ರ ಮದ್ಯ ಸರಬರಾಜು ಮಾಡಬೇಕೆಂದು ನಿಯವಿದ್ದರೂ, ಇವುಗಳನ್ನು ಗಾಳಿಗೆ ತೂರಿ ಮಾಲೀಕರು ಜಾತ್ರೆ ಸಮಯದಲ್ಲಿ ದಿನ 24ಗಂಟೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜಾತ್ರೆಗೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ತೊಂದರೆ ಆಗುವುದಲ್ಲದೇ, ಅನೈತಿಕ, ಅಕ್ರಮ ಚಟುವಟಿಕೆ ನಡೆಯಲು ದಾರಿ ಮಾಡಿಕೊಟ್ಟಂತೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳು ಕಾನೂನು ಗಾಳಿಗೆ ತೂರಿ ಮದ್ಯದಂಗಡಿ ಮಾಲೀಕರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆಂದು ಗಂಭೀರವಾಗಿ ತಮ್ಮ ಮನವಿಯಲ್ಲಿ ಆರೋಪಿಸಿದ ಅವರು, ಜಾತ್ರೆ ಸಮಯದಲ್ಲಿ ಅಹಿತಕರ ಘಟನೆಗಳಾಗಂತೆ ತಡೆಯಲು ಜಿಲ್ಲಾಧಿಕಾರಿಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು. ಚಿಂಚಲಿ ರೈತ ಸಂಘದ ಅಧ್ಯಕ್ಷ ಗುರುನಾಥ ಹೆಗಡೆ, ವಿಠ್ಠಲ ಜವೇಜಾರ, ಕರೆಪ್ಪ ಮುರಗಜನ್ನವರ, ಭೀಮಾ ಮುಂಜೆ, ಮಾಯಪ್ಪ ಗಳತಗಿ, ಪ್ರಕಾಶ ಪಾಟೀಲ, ರಾಮಾ ಗಳತಗಿ, ರಾಜು ಸೌಂದಲಗಿ, ಶಿವಾಜಿ ಪಾಟೀಲ, ಶಂಕರ ಖಿಲಾರೆ, ಲಖನ ಖೋತ, ಕುಮಾರ ಉಪ್ಪಾರ, ಮಹಾದೇವ ಈರಗಾರ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin