ಶ್ರೀ ರಾಘವೇಂದ್ರ ಆರಾಧನಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

raghavendra

ನಂಜನಗೂಡು, ಆ.20- ಶ್ರೀರಾಘವೇಂದ್ರ ಗುರುಸಾರ್ವಭೌಮರ 345ನೇ ಆರಾಧನಾ ಮಹೋತ್ಸವನ್ನು ಶ್ರೀ ರಾಘವೇಂದ್ರಸ್ವಾಮಿ ಪ್ರತೀಕ ಸನ್ನಿಧಾನದ ಮೂಲ ವiಠದಲ್ಲಿ ಮಂಗಳ ವಾದ್ಯದೊಂದಿಗೆ ಪ್ರಾರಂಭಗೊಂಡು ಪೂಜಾಕೈಂಕಾರ್ಯಗಳು ವಿಧಿವತ್ತಾಗಿ ನೆರವೇರಿದವು.
ಬೆಳಗಿನ ಜಾವ 5 ರಿಂದ 5.30 ರವರೆಗೆ ಸುಪ್ರಭಾತ, 7ಕ್ಕೆ ಪಂಚಾಮೃತ ಅಭಿಷೇಕ, 8 ಕ್ಕೆ ಗುರುರಾಜರಿಗೆ ಪಾದಪೂಜೆ, 10 ಕ್ಕೆ ಪಂಡಿತರಿಂದ ಉಪನ್ಯಾಸ, 11 ಕ್ಕೆ ಅರ್ಚನೆ ಹಾಗೂ ಕನಕಾಭಿಷೇಕ, ಮಧ್ಯಾಹ್ನ 12 ಕ್ಕೆ ನೈವೇದ್ಯ, ಹಸ್ತೋದಕ, ವಿಶೇಷ ಅಲಂಕಾರ, ನಂತರ ತೀರ್ಥ ಪ್ರಸಾದ ವಿನಿಯೋಗ, ಸಂಜೆ 6.30 ಕ್ಕೆ ಸ್ವಸ್ತಿವಾಚನ, ಮಹಾಮಂಗಳಾರತಿ ಹಾಗೂ ಶೇಯ-ಪ್ರಾರ್ಥನೆ, ದೇವತಾ ಕಾರ್ಯಗಳು ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆದವು.
ಆಚಾರ್ಯ ಸ್ಥಾನದಲ್ಲಿರುವ ವಿ.ವಾಸರಾಜಚಾರ್ಯ ಉಸ್ತುವಾರಿ ವ್ಯವಸ್ಥಾಪಕ ಸುಧೀಂದ್ರಚಾರ್ ಸುಬ್ಬಲಕ್ಷ್ಮಿ ಹಿರಿಯರಾದ ಆರ್.ವಿ.ಜಯರಾಮ್ ಆಚಾರ್ ಆಚಾರ್ಯ ಸ್ಥಾನದಲ್ಲಿರುವ ವಿ.ವ್ಯಾಸರಾಜಚಾರ್ಯ ಉಸ್ತುವಾರಿ ಸುಗಮವಾಗಿ ಪೂಜಾ ಕೈ-ಕಾರ್ಯಗಳನ್ನು ನೆರವೇರಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ನಾಳೆ ಅಕ್ಷತಾ ರುದ್ರಪಟ್ನ ಎಸ್ ಮತ್ತು ಸಂಗಡಿಗರಿಂದ ಶಾಸ್ತ್ರೀಯ ಸಂಗೀತ ಮತ್ತು ದೇವರನಾಮಗಳು ಪ್ರತಿದಿನ ಸಂಜೆ 6-30 ರಿಂದ 8-30 ರಂದು ಸನ್ನಿಧಿಯ ಮುಂಭಾಗ ಬೃಹತ್ ವೇದಿಕೆಯಲ್ಲಿ ಈ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ.
ಆ.22 ಸೋಮವಾರ ಸುಜ್ಞಾನೇಂದ್ರತೀರ್ಥರ ಆರಾಧನಾ ಮಹೋತ್ಸವ ಏರ್ಪಡಿಸಿದ್ದು ಸಂಜೆ 6 ರಿಂದ 8 ಗಂಟೆ ತನಕ ಮೈಸೂರು ವಿದ್ವಾನ್ ಶ್ರೀನಾಥ್, ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಆರಾಧನ ಮಹೋತ್ಸವಕ್ಕೆ ಧನ, ದಾನ್ಯ, ಕನಕ ಇತ್ಯಾಧಿಬ ರೂಪದಲ್ಲಿ ಸೇವೆ ಸಲ್ಲಿಸುವ ಭಕ್ತರು ಶ್ರೀ ಮಂಠದ ಕಚೇರಿಯಲ್ಲಿ ಪಾವತಿಸಿ, ರಶೀದಿ ಪಡೆಯಬೇಕು ಹೆಚ್ಚಿನ ವಿವರಗಳಿಗೆ 08221-224690 ಸಂಪರ್ಕಿಸಬೇಕೆಂದು ವ್ಯವಸ್ಥಾಪಕರಾದ ಕೆ.ಸುಧಾಕರ್ ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin