ಶ್ರೀ ಹುಡೆದ ಮಹಾಲಕ್ಷ್ಮಿದೇವಿ ಸಮುದಾಯ ಭವನದ ಭೂಮಿ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

 

6
ಹುನಗುಂದ,ಫೆ.15- ಭಾರತ ದೇಶದಲ್ಲಿರುವ ದೇವಸ್ಥಾನಗಳು ನಮ್ಮ ದೇಶದ ಸಾಂಸ್ಕ್ರತಿಕ ಪ್ರತೀಕಗಳು. ಭಾರತೀಯ ಈ ಪುಣ್ಯ ಪವಿತ್ರ ನೆಲದಲ್ಲಿ ಋಷಿ ಮುನಿಗಳು, ಸಂತರು, ಶರಣರು, ಮಹಾತ್ಮರು ಜನ್ಮದಿಂದ ಪುಣ್ಯಪಾವನವಾಗಿದೆ. ಈ ಭೂಮಿಯು ವಿಶ್ವಕ್ಕೆ ಆಧ್ಯಾತ್ಮಿಕ ಸಂದೇಶ ಸಾರಿದೆ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಸಪ್ಪನವರ ಹೇಳಿದರು. ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ 2016-17ನೇ ಸಾಲಿನ ಜಿಪಂ ಅಬಿವ್ರಧ್ಧಿ ಅನುಧಾನ ಯೋಜನೆಯಡಿಯಲ್ಲಿ ಶ್ರೀ ಹುಡೆದ ಮಹಾಲಕ್ಷ್ಮಿದೇವಿ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಈ ಮೊದಲು ಗ್ರಾಮದಲ್ಲಿ ಭರವಸೆ ನೀಡಿದಂತೆ ದೇವಸ್ಥಾನಕ್ಕೆ ಅನುದಾನ ನೀಡಿದ್ದು ಇತರೆ ಮೂಲಭೂತ ಸೌಕರ್ಯಗಳಿಗಾಗಿ ಸಹಕಾರ ನೀಡುವುದಾಗಿ ನಾಗರಿಕರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಅಮೀನಪ್ಪ ಸಂಧಿಗವಾಡ, ಶಂಕ್ರಪ್ಪ ನೇಗಲಿ, ಎಪಿಎಮಸಿ ಸದಸ್ಯ ಸಿವಲಿಂಗಪ್ಪ ನಾಲ್ತವಾಡ, ಸೀದ್ರಾಮಪ್ಪ ಶೆಟ್ಟರ, ಎಇಇ ಬಿ.ಕೆ ನಾಯ್ಕರ, ಶರಣಪ್ಪಗೌಡ ಪಾಟೀಲ, ಗಂಗಪ್ಪ ಬಡೀಗೇರ, ಮಂಗಳಾ ರಂಗನಗೌಡ್ರ, ನಿರ್ಮಲಾ ಪಾಟೀಲ, ಭಾರತಿ ರಾಯನಗೌಡ್ರ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin