ಶ್ವೇತಭವನಕ್ಕೆ ನುಗ್ಗಲು ಯತ್ನಿಸಿದ ಮಹಿಳೆ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

White-House
ವಾಷಿಂಗ್ಟನ್, ಮೇ 18-ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಬೇಲಿ ಹಾರಿ ಒಳ ನುಗ್ಗಲು ಯತ್ನಿಸಿದ ಮಹಿಳೆಯೊಬ್ಬಳನ್ನು ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್‍ಹೌಸ್‍ನಲ್ಲಿದ್ದ ವೇಳೆಯಲ್ಲೇ ಈ ಘಟನೆ ನಡೆದಿದೆ.  ಶ್ವೇತಭವನದ ಉತ್ತರಭಾಗದ ಬೇಲಿಯನ್ನು ಜಿಗಿದ ಮಹಿಳೆಯನ್ನು ಕಸ್ಟಡಿಯಲ್ಲಿಡಲಾಗಿದೆ ಎಂದು ಬೇಹುಗಾರಿಕೆ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಈ ಶಂಕಿತ ಮಹಿಳೆ ವಿರುದ್ಧ ಅತಿಕ್ರಮಣ ಆರೋಪ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.ಶ್ವೇತಭವನದ ಬೇಲಿಯನ್ನು ಹತ್ತಿ ಒಳನುಗ್ಗಲು ಯತ್ನಿಸುವ ಕೆಲವು ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಲೇ ಇದೆ. ಮಾ.10ರಂದು ಕ್ಯಾಲಿಫೋರ್ನಿಯಾ ನಿವಾಸಿಯೊಬ್ಬ ವೈಟ್‍ಹೌಸ್ ಬೇಲಿಯನ್ನು ಹಾರಿ ಭದ್ರತಾ ಗಾರ್ಡ್‍ಗಳ ಕಣ್ತಪ್ಪಿಸಿ 17 ನಿಮಿಷಗಳ ಕಾಲ ಆವರಣದೊಳಗೆ ಅಡ್ಡಾಡಿದ್ದ. ನಂತರ ಆತನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯತೆ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin