ಷೆಲ್‍ಗೆ ಎಂಬ್ರಾಯಿರ್‍ನಿಂದ 5.76 ದಶಲಕ್ಷ ಡಾಲರ್ ಲಂಚ

ಈ ಸುದ್ದಿಯನ್ನು ಶೇರ್ ಮಾಡಿ

Embraer--plane-deal

ವಾಷಿಂಗ್ಟನ್, ಅ.25– ಭಾರತೀಯ ವಾಯು ಪಡೆಗೆ (ಐಎಎಫ್) 208 ದಶಲಕ್ಷ ಡಾಲರ್ ವೆಚ್ಚದ ಮೂರು ಎಂಬ್ರಾಯರ್ ವಿಮಾನಗಳ ಮಾರಾಟ ಹಗರಣದ ತನಿಖೆ ತೀವ್ರಗೊಂಡಿದ್ದು, ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ವ್ಯವಹಾರ ಕುದುರಿಸಲು ತಾನು ಪಡೆದ ಗುತ್ತಿಗೆಗಾಗಿ ಬ್ರೆಜಿಲ್‍ನ ವಿಮಾನ ನಿರ್ಮಾಣ ಸಂಸ್ಥೆ ಎಂಬ್ರಾಯರ್, ಲಂಚದ ರೂಪವಾಗಿ ಕಂಪನಿಯೊಂದಕ್ಕೆ 5.76 ದಶಲಕ್ಷ ಡಾಲರ್ ನೀಡಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತ ಸೇರಿದಂತೆ ನಾಲ್ಕು ದೇಶಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರೆ ಅಮೆರಿಕ ಮತ್ತು ಬ್ರೆಜಿಲ್ ಅಧಿಕಾರಿಗಳಿಗೆ 205.5 ದಶಲಕ್ಷ ಡಾಲರ್ ನೀಡುವುದಾಗಿ ಎಂಬ್ರಾಯರ್ ಸಮ್ಮತಿಸಿದೆ.

ಡೊಮಿನಿಕ್ ರಿಪಬ್ಲಿಕ್, ಸೌದಿ ಅರೇಬಿಯಾ ಮತ್ತು ಮೊಸಾಂಬಿಕ್‍ನ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿಕೆಯ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ 107 ದಶಲಕ್ಷ ಡಾಲರ್ ದಂಡವನ್ನು ಎಂಬ್ರಾಯಿರ್ ಪಾವತಿಸಲಿದೆ.  ಹಿಂದಿನ ಯುಪಿಎ ಸರ್ಕಾರದಲ್ಲಿ ನಡೆದ ಈ ಹಗರಣದ ಬಗ್ಗೆ ಆರೋಪಪಟ್ಟಿ ದಾಖಲಿಸಿಕೊಂಡಿರುವ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin