ಸಂಗೊಳ್ಳಿರಾಯಣ್ಣ ದೇಶದ ಆಸ್ತಿ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ

ಈ ಸುದ್ದಿಯನ್ನು ಶೇರ್ ಮಾಡಿ

kr-nagar

ಕೆ.ಆರ್.ನಗರ, ಮಾ.3- ದೇಶದಲ್ಲಿಯೆ ಪ್ರಥಮವಾಗಿ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಸಂಗೊಳ್ಳಿರಾಯಣ್ಣ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ರಾಯಣ್ಣ ದೇಶದ ಆಸ್ತಿಯಾಗಿದ್ದು ಅವರ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ತಾಲೂಕಿನ ಅರಕೆರೆಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿರಾಯಣ್ಣ ಗಾರೆ ಕೆಲಸಗಾರರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸಂವಿದಾನದ ಆಶಯದಂತೆ ಎಲ್ಲರೂ ಜಾತ್ಯಾತೀತವಾಗಿ ಬದುಕು ನಡೆಸಬೇಕು ಎಂದು ಸಲಹೆ ನೀಡಿದ ಶಾಸಕರು ನಾನು ರಾಜಕೀಯ ನಿವೃತ್ತಿ ಪಡೆಯುವ ಒಳಗೆ ತಾಲೂಕಿನಲ್ಲಿ ಜಾತಿ ರಾಜಕಾರಣವನ್ನು ನಿರ್ಮೂಲನೆ ಮಾಡುತ್ತೇನೆ ಎಂದು ತಿಳಿಸಿದರು.

ಅತ್ಯಂತ ಕಡಿಮೆ ಸಂಬಳಕ್ಕೆ ಕಟ್ಟಡ ನಿರ್ಮಾಣದ ಕೆಲಸ ಮಾಡುವ ಈ ಸಂಘದ ಪ್ರತಿಯೊಬ್ಬ ಸದಸ್ಯರಿಗೂ ವೈಯಕ್ತಿಕವಾಗಿ ಜೀವ ವಿಮೆ ಮಾಡಿಸಿಕೊಡಲಾಗುತ್ತದೆ. ಸದಸ್ಯರು ಅದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಅಲ್ಲದೆ ದುಶ್ಚಟಗಳಿಂದ ದೂರವಿದ್ದು ಸ್ವಾಭಿಮಾನದ ಬದುಕನ್ನು ನಡೆಸಬೇಕು ಎಂದು ಕಿವಿಮಾತು ಹೇಳಿದರು. ಶಿಥಲಗೊಂಡಿರುವ ದೇವಸ್ಥಾನದ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಗ್ರಾಮಸ್ಥರು ಮುಂದಾದಲ್ಲಿ ಪಕ್ಷಭೇದ ಮಾಡದೆ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಮತ್ತು ಜಾತಿ ಸಮುದಾಯವರು ಇರುವ ರಸ್ತೆಗಳನ್ನು ಈಗಾಗಲೇ ಕಾಂಕ್ರೀಟಿಕರಣ ಮಾಡಿಸಲಾಗಿದ್ದು ಗ್ರಾಮಕ್ಕೆ ಆಗಬೇಕಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಡಲಾಗುತ್ತದೆ ಎಂದರು.

ತಾಪಂ ಸದಸ್ಯ ಮಹದೇವ್, ಗ್ರಾಪಂ ಸದಸ್ಯರಾದ ಮಾದೇಗೌಡ, ಶ್ವೇತ, ಕೃಷ್ಣಾನಂದ, ಮಾಜಿ ಸದಸ್ಯ ವಿಷಕಂಠೇಗೌಡ, ಪಿಡಿಒ ಅನಿತ, ಮುಖಂಡರಾದ ಮಹೇಶ್, ಕುಳ್ಳೇಗೌಡ, ಬೀರೇಗೌಡ, ರಾಮನಾಯಕ, ಸಣ್ಣಮಾಲೇಗೌಡ, ಶಿವಣ್ಣ, ಸಂಘದ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಮ, ಸಹ ಕಾರ್ಯದರ್ಶಿ ಮಹೇಶ್, ಖಜಾಂಚಿ ಜಗದೀಶ್, ಸದಸ್ಯರಾದ ತಮ್ಮೇಗೌಡ, ಪಾಪೇಗೌಡ, ಕಾಂತರಾಜು, ಅಣ್ಣಯ್ಯ, ಮಹೇಂದ್ರ, ಕುಮಾರ್ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin