ಸಂಗೊಳ್ಳಿರಾಯಣ್ಣ ಪ್ರತಿಮೆ ಖಡ್ಗ ಬದಲಾವಣೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Sangolli-Rayanna

ಬೆಂಗಳೂರು, ಆ.10- ಸಿಟಿ ರೈಲ್ವೆ ನಿಲ್ದಾಣ ಸಮೀಪ ಖೊಡೇ ವೃತ್ತದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಖಡ್ಗ ವಿರೂಪಗೊಂಡು ಒಂದು ವರ್ಷ ಕಳೆದರೂ ಇನ್ನೂ ಖಡ್ಗವನ್ನು ಬದಲಾಯಿಸದ ಬಿಬಿಎಂಪಿ ಅಧಿಕಾರಿಗಳ ವರ್ತನೆಯನ್ನು ಸಂಗೊಳ್ಳಿರಾಯಣ್ಣ ಪ್ರತಿಷ್ಠಾನ ತೀವ್ರವಾಗಿ ಖಂಡಿಸಿದೆ.  ಖಡ್ಗವನ್ನು ದುಷ್ಕರ್ಮಿಗಳು ವಿರೂಪ ಗೊಳಿಸಿದ್ದು, ಇದೀಗ ಒಂದು ವರ್ಷ ಕಳೆದಿದೆ. ವಿರೂಪಗೊಂಡ ದಿನ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ನಾಯಕತ್ವದಲ್ಲಿ ಬೃಹತ್ ಹೋರಾಟ ನಡೆಸಲಾಗಿತ್ತು. ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಖಡ್ಗ ಬದಲಿಸುವಂತೆ ಸೂಚಿಸಿದ್ದರು. ಆದರೆ ಇದುವರೆಗೆ ಖಡ್ಗ ಬದಲಾವಣೆ ಮಾಡಲು ಅಧಿಕಾರಿಗಳು ಮನಸ್ಸು ಮಾಡಿಲ್ಲ ಎಂದು ಪ್ರತಿಷ್ಠಾನ ಆಕ್ರೋಶ ವ್ಯಕ್ತಪಡಿಸಿದೆ.
ಆ.15ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಹ ಇಲ್ಲಿಗೆ ಬಂದಿದ್ದರು.

ಅವರೂ ಕೂಡ ಖಡ್ಗ ಬದಲಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿ ದ್ದರು. ಆದರೂ ಅಧಿಕಾರಿಗಳು ಇದುವರೆಗೆ ಖಡ್ಗ ಬದಲಾವಣೆ ಮಾಡಿಲ್ಲ. ಅಧಿಕಾರಿಗಳ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಗೊಳ್ಳಿರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಗೊಳ್ಳಿ ಕೃಷ್ಣ ಮೂರ್ತಿ ಹಾಗೂ ಕಾರ್ಯದರ್ಶಿ ಎನ್. ವೆಂಕಟೇಶ್ ಹೇಳಿದ್ದಾರೆ. ಆ.15 ರಂದು ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನವಿದೆ. ಅಷ್ಟರೊಳಗೆ ಹೊಸ ಖಡ್ಗವನ್ನು ಪ್ರತಿಮೆಗೆ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin