ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗೆ ತಿರುಗೇಟು ನೀಡಲು ಯಡಿಯೂರಪ್ಪ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-vs-Yadiyurappa

ಬೆಂಗಳೂರು, ಅ.12-ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗೆ ತಿರುಗೇಟು ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಜ್ಜಾಗಿದ್ದಾರೆ ಎನ್ನಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ, ದಲಿತ ಮುಖಂಡ ಶಿವರಾಂ ಅವರು ಕಾಂಗ್ರೆಸ್‍ನಲ್ಲಿ ದಲಿತ ಸಿಎಂ ವಿವಾದ ತಾರಕಕ್ಕೇರುವಂತೆ ಮಾಡಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಬಿಜೆಪಿಗೆ ಯಡಿಯೂರಪ್ಪ ಸೆಳೆದಿದ್ದಾರೆ. ಶಿವರಾಂ ಅವರು ಪಕ್ಷಕ್ಕೆ ಬಂದರೆ ಅವರಿಗೆ ಅಹಿಂದ ವರ್ಗಗಳ ನಾಯಕತ್ವ ವಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.  ಶಿವರಾಂ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮ ಅ. 14 ರಂದು ನ್ಯಾಷನಲï ಕಾಲೇಜï ಮೈದಾನದಲ್ಲಿ ನಡೆಯಲಿದ್ದು, ಅಂದು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಷಯದಲ್ಲಿ ಕೆ.ಎಸ್. ಈಶ್ವರಪ್ಪ ಅವರಿಗೆ ರಾಜ್ಯದಲ್ಲಿದ್ದ ಸಂಘ ಪರಿವಾರದ ನಾಯಕರೊಬ್ಬರೇ ಪುಷ್ಟಿ ನೀಡುತ್ತಿದ್ದಾರೆಂದು ಇತ್ತೀಚೆಗಷ್ಟೇ ಪಕ್ಷದ ಮುಖಂಡ ರಾಮಲಾಲï ಅವರ ಬಳಿ ಬಿಎಸ್‍ವೈ ದೂರು ನೀಡಿದ್ದರು.  ಈಶ್ವರಪ್ಪ ಸುಮ್ಮನಿರುವಂತೆ ನೀವು ನೋಡಿಕೊಳ್ಳಿ. ಇಲ್ಲವೇ ಸುಮ್ಮನೆ ಇರುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ರಾಮಲಾಲ್ ಎದುರು ಯಡಿಯೂರಪ್ಪ ಹೇಳಿಕೊಂಡಿದ್ದರು ಎಂದು ಗೊತ್ತಾಗಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಷಯದಲ್ಲಿ ಕೆಂಡಾಮಂಡಲವಾಗಿರುವ ಬಿಎಸ್‍ವೈ, ಆರು ವರ್ಷಗಳ ಕಾಲ ಪಕ್ಷದಿಂದ ಈಶ್ವರಪ್ಪನವರನ್ನು ಉಚ್ಛಾಟಿಸಲು ಸಜ್ಜಾಗಿದ್ದರು ಎನ್ನಲಾಗಿದೆ. ಆದರೆ, ತಕ್ಷಣ ದುಡುಕದಂತೆ ವರಿಷ್ಠರ ಸಲಹೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸುಮ್ಮನಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin