ಸಂಚಲನ ಮೂಡಿಸಿದ ಪಿಗ್ಗಿ ‘ಬೇವಾಚ್’ ಪೋಸ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

Priyanka-chopra
ಕ್ವಾಂಟಿಕೋ ಟಿವಿ ಸರಣಿ ಮೂಲಕ ಈಗಾಗಲೇ ಅಮೆರಿಕದಲ್ಲೂ ಜನಪ್ರಿಯವಾಗಿರುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಮತ್ತೆ ಸುದ್ದಿಯಲ್ಲಿದ್ದಾಳೆ. ಬೇವಾಚ್ ಸಿನಿಮಾ ಮೂಲಕ ಹಾಲಿವುಡ್‍ನಲ್ಲೂ ಮಿಂಚಲಿರುವ ಪಿಗ್ಗಿಯ ಹೊಸ ಪೋಸ್ಟರ್  ಬಿಡುಗಡೆಯಾಗಿದೆ. ರಕ್ತಪಿಪಾಸು ಬಾವಲಿಯ ರೆಕ್ಕೆಗಳು, ತುಟಿಯಂಚಿನಲ್ಲಿ ಸೋರುತ್ತಿರುವ ನೆತ್ತರು, ಸೇಡಿನ ಕಿಡಿ ಕಾರುವ ಕಣ್ಣುಗಳ ಹಾಗೂ ತೊಡೆಯಲ್ಲಿ ಗನ್ ಇರುವ ಖಳನಾಯಕಿ ಲುಕ್‍ನ ಪೋಸ್ಟರ್  ನಿನ್ನೆ ಬಿಡುಗಡೆಯಾಗಿದ್ದು, ಭಾರೀ ಸಂಚಲನ ಸೃಷ್ಟಿಸಿದೆ. ಈವರೆಗೆ ಪಿಸಿಯ ಇಂಥ ಪೋಸ್ಟರ್ ನನ್ನು ನೋಡಿರದ ಅಭಿಮಾನಿಗಳು ಈ ಬ್ಯಾಡ್ ವುಮೆನ್ ಶೈಲಿಯ ಚಿತ್ರ ನೋಡಿ ಚಕಿತರಾಗಿದ್ದಾರೆ.

ಸ್ಟರ್  ಈ ರೀತಿ ಇರುವಾಗ ಸಿನಿಮಾದಲ್ಲಿ ಪಿಗ್ಗಿಯ ಪಾತ್ರ ಯಾವ ರೀತಿ ಇರಬಹುದು ಎಂಬ ಬಿಸಿ ಚರ್ಚೆ ಅಭಿಮಾನಿ ವಲಯದಲ್ಲಿ ನಡೆದಿದೆ. ಪಿಗ್ಗಿ ಈ ಹಿಂದೆ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಅಭಿನಯಿಸಿದ್ದ ಐತ್‍ರಾಜ್ ಸಿನಿಮಾದಲ್ಲಿ ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಂಡು ಗಮನಸೆಳೆದಿದ್ದಳು. ಕ್ವಾಂಟಿಕೋ ಟಿವಿ ಸೀರಿಯಲ್‍ಗಾಗಿ ನ್ಯೂಯಾರ್ಕ್‍ನಲ್ಲಿ ನೆಲೆಸಿರುವ ಈ ಅಂತಾರಾಷ್ಟ್ರೀಯ ನಟಿ ಹಾಲಿವುಡ್‍ನಲ್ಲಿ ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಯೋಚನೆ ಯಲ್ಲಿದ್ದಾಳೆ.

► Follow us on –  Facebook / Twitter  / Google+

Facebook Comments

Sri Raghav

Admin