ಸಂಚಾರ ನಿಯಮ ಉಲ್ಲಂಘನೆ : ಚಾಲಕರಿಗೆ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

traffic

ಗೌರಿಬಿದನೂರು,ಅ.10- ಪಟ್ಟಣದಲ್ಲಿ ಚಾಲನಾ ಪರವಾನಿಗೆಯಿಲ್ಲದ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದ ದ್ವಿಚಕ್ರ ಹಾಗೂ ಇತರೆ ವಾಹನಗಳಿಗೆ ಎಸೈ ಅವಿನಾಶ್ ದಂಡವನ್ನು ವಿದಿಸುವ ಮೂಲಕ ಬಿಸಿಮುಟ್ಟಿಸಿದರು.ಪೋಷಕರು 18 ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ವಾಹನವನ್ನು ಚಾಲನೆಗೆ ನೀಡುವುದು ಕಾನೂನು ರೀತ್ಯಾ ಅಪರಾದವಾಗಿದ್ದು, ಜತೆಗೆ ಮುಂದಾಗುವ ಅವಘಡಗಳಿಗೆ ಪೋಷಕರೇ ಜವಾಬ್ದಾರಿಯಾಗುತ್ತಾರೆ, ಈ ನಿಟ್ಟಿನಲ್ಲಿ ಮುಖ್ಯವಾಗಿ ಸಣ್ಣ ಮಕ್ಕಳು ದ್ವಿಚಕ್ರ ವಾಹನ ಚಾಲನೆ ಮಾಡುವುದನ್ನು ತಪ್ಪಿಸಲುವ ಸಲುವಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಆಟೋಗಳ ಚಾಲಕರು ಕಡ್ಡಯವಾಗಿ ಸಮವಸ್ತ್ರ ಹಾಗೂ ನಿಗದಿತ ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯಬೇಕು, ಯಾವುದೇ ಕಾರಣಕ್ಕೂ ಪ್ರೆಂಟ್ ಸೀಟ್ ಹಾಕುವಂತಿಲ್ಲ, ಕರ್ಕಶ ಹಾರನ್ ಮಾಡುವುದು, ಜೋರಾಗಿ ಟೇಪ್‍ರೆಕಾರ್ಡ್ ಹಾಕುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಜತೆಗೆ ಪಟ್ಟಣದಲ್ಲಿ ನಿಗದಿತ ಸ್ಥಳಗಳಲ್ಲಿ ಆಟೋ ನಿಲ್ದಾಣಕ್ಕೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು, ಎಲ್ಲಂದರಲ್ಲಿ ಆಟೋಗಳನ್ನು ನಿಲುಗಡೆ ಮಾಡುವುದು ಸಲ್ಲ ಎಂದರು.
ಟಾಪ್ ಪ್ರಯಾಣ ಸಲ್ಲ:
ಸಾರಿಗೆ ಹಾಗೂ ಖಾಸಗಿ ಬಸ್‍ಗಳ ಟಾಪ್ ಮೇಲೆ ಪ್ರಯಾಣಿಕರನ್ನು ಹಾಕಿಕೊಂಡು ಬರುವಂತಹ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ನಿರ್ಧಾಕ್ಷಣ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಎಸೈ ಅವಿನಾಶ್ ಎಚ್ಚರಿಕೆ ನೀಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin