ಸಂಜೆ ಎಸ್.ಎಂ.ಕೃಷ್ಣ – ಚೆಲುವರಾಯಸ್ವಾಮಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

SMK-Chaluvarayaswamy

ಬೆಂಗಳೂರು, ಜ.31– ವಿದೇಶಾಂಗ ಖಾತೆ ಮಾಜಿ ಸಚಿವ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರನ್ನು ಇಂದು ಸಂಜೆ ಭೇಟಿ ಮಾಡುವುದಾಗಿ ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡುತ್ತಿರುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ. ಸೌಜನ್ಯ ಭೇಟಿಯಾಗುವೆ ಎಂದು ಹೇಳಿದರು. ಕೃಷ್ಣ ಅವರು ಸಾಮಾನ್ಯ ರಾಜಕಾರಣಿ ಅಲ್ಲ. ಅವರ ಬಗ್ಗೆ ನಾನು ಹಗುರವಾಗಿ ಮಾತನಾಡುವುದಿಲ್ಲ. ನಮ್ಮ ಜಿಲ್ಲೆಯವರು, ಹತ್ತಿರದಿಂದ ಅವರನ್ನು ನೋಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಮುಂದಿನ ನಡೆ ಏನೆಂಬುರ ಸುಳಿವು ನೀಡಿಲ್ಲ. ಪ್ರಧಾನಿ ಹುದ್ದೆ ಹೊರತುಪಡಿಸಿ ಉಳಿದೆಲ್ಲ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದವರು. ಎಲ್ಲರಿಗೂ ಇಷ್ಟವಾಗುವ ಗೌರವಯುತ ರಾಜಕಾರಣಿ ಎಂದು ಹೇಳಿದರು.

ಜೆಡಿಎಸ್‍ನ ಏಳು ಮಂದಿ ಬಂಡಾಯ ಶಾಸಕರ ಮುಂದಿನ ನಡೆಯ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.  ಏಳು ಮಂದಿ ಶಾಸಕರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಅಧಿಕೃತವಾಗಿ ಯಾವುದೇ ಪಕ್ಷ ಸೇರಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈಗಿನ ಸ್ಥಿತಿಯಲ್ಲಿ ರಾಜೀನಾಮೆ ಕೊಡಲು ಆಗೋಲ್ಲ. ಟಿಕೆಟ್ ಕೊಡಿ ಎಂದು ಯಾರಿಗೂ ಅರ್ಜಿ ಹಾಕಿಲ್ಲ. ಚುನಾವಣೆ ಇನ್ನೂ ಬಹಳ ದೂರವಿದೆ. ಜೆಡಿಎಸ್ ವರಿಷ್ಠರು ಬಂಡಾಯ ಶಾಸಕರನ್ನು ಸೇರಿಸೊಲ್ಲ. ಜೆಡಿಎಸ್ ಬಾಗಿಲು ಹಾಕಿದೆ ಎಂದು ಹೇಳಿದಾಗ, ಮಾಗಡಿ ಶಾಸಕ ಬಾಲಕೃಷ್ಣ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದ ಅವರು, ಸಂದರ್ಭ ಬಂದಾಗ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.  ಶಾಸಕ ಜಮೀರ್ ಅಹಮದ್‍ಖಾನ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin