ಸಂಧಾನಕಾರರ ನೇಮಕ ಮಾಡಿರುವುದು ಕೇಂದ್ರದ ವೈಫಲ್ಯಕ್ಕೆ ಸಾಕ್ಷಿ : ಖರ್ಗೆ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

mallikarjun-kharge

ಕಲಬುರಗಿ, ಅ.24-ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವುದಕ್ಕಾಗಿ ಸುಸ್ಥಿರ ಮಾತುಕತೆ ನಡೆಸಲು ಗುಪ್ತಚರ ದಳದ(ಐಬಿ) ಮಾಜಿ ನಿರ್ದೇಶಕ ದಿನೇಶ್ವರ್ ಶರ್ಮಾ ಅವರನ್ನು ನೇಮಕ ಮಾಡಿರುವುದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಧುರೀಣ ಎಂ. ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.  ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರ ಬಿಕ್ಕಟ್ಟು ನಿವಾರಣೆಗಾಗಿ ಸರ್ಕಾರಗಳು ದೀರ್ಘಕಾಲದಿಂದಲೂ ಮಾತುಕತೆ ನಡೆಸಿ ವಿಫಲವಾಗಿರುವಾಗ, ಸಂಧಾನಕಾರರಿಂದ ಈ ಸಮಸ್ಯೆ ಇತ್ಯರ್ಥವಾಗುತ್ತದೆಯೇ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ಮುಂದಾಗಿ ಮಾತನಾಡಿದರೂ ಸಮಸ್ಯೆ ಬಗೆಹರಿಯುವುದಿಲ್ಲ. ಸನ್ನಿವೇಶ ಹೀಗಿರುವಾಗ ಸಂಧಾನಕಾರರನ್ನಾಗಿ ದಿನೇಶ್ವರ್ ಅವರನ್ನು ನೇಮಕ ಮಾಡುವ ಅಗತ್ಯ ಏನಿತ್ತು. ಇದು ಕೇಂದ್ರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಖರ್ಗೆ ಟೀಕಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin