ಸಂಧಿವಾತಕ್ಕೆ ಆಯುರ್ವೇದ ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

ಆಧುನಿಕ ವೈದ್ಯ ಪದ್ಧತಿಗೆ ಸವಾಲಾಗಿರುವ ಈ ಆಮವಾತ ರೋಗಕ್ಕೆ ಆಯುರ್ವೇದದಲ್ಲಿ ಪರಿಣಾಮಕಾರಿ ಚಿಕಿತ್ಸೆ ಉಂಟು. ನಿದಾನ ಪರಿವರ್ಜನೆ, ಲಂಘನ, ದೀಪನ, ಪಾಚನ, ಎರೇಚನ, ಬಸ್ತಿ ಮುಂತಾದ ಸೂತ್ರಗಳ ಆಧಾರದ ಮೇಲೆ ಆಮವಾತ ರೋಗದ ಚಿಕಿತ್ಸೆಯನ್ನು ಮಾಡುತ್ತಾರೆ.ನಿದಾನ ಪರಿವರ್ಜನನಿದಾನ ಎಂದರೆ ಆಯುರ್ವೇದ ವೈದ್ಯಶಾಸ್ತ್ರದಲ್ಲಿ ರೋಗಕ್ಕೆ ಕಾರಣಗಳು. ಪರಿವರ್ಜನೆ ಎಂದರೆ ಅವುಗಳನ್ನು ವರ್ಜಿಸುವುದು, ನಿದಾನ ಪರಿವರ್ಜನೆ ಎಂದರೆ ರೋಗಕ್ಕೆ ಕಾರಣವಾದ ಅಂಶಗಳನ್ನು ವರ್ಜಿಸುವುದು ಅಥವಾ ಬಿಡುವುದು ಎಂದು ಅರ್ಥ. ವಾತದೋಷ, ಪ್ರಕೋಪಕ್ಕೆ ಅತಿ ದೇಹ ಶ್ರಮ, ಅತಿ ಮೈಥುನ, ಅತಿ ನಿದ್ದೆ ಹಾಗೂ ವಾತವನ್ನು ಹೆಚ್ಚು ಮಾಡುವ ಆಹಾರ ಪದಾರ್ಥಗಳು. ಅತಿ ಶ್ರಮ, ಮೈಥುನ, ಹಗಲು ನಿದ್ದೆ ಬಿಡುವುದು. ಈ ರೀತಿ ನಿಧಾನ ಪರಿವರ್ಜನೆ ಅಂದರೆ ಆಮದೋಷ ಉತ್ಪತ್ತಿಯನ್ನು ನಿಲ್ಲಿಸಿ ವಾತದೋಷ ಪ್ರಕೋಪವನ್ನು ತಡೆದರೆ ಆಮವಾತ ರೋಗದ ಅರ್ಧ ಚಿಕಿತ್ಸೆ ಆದಂತೆ.

                                                                                       -ಡಾ.ಅಬ್ದುಲ್ ಖಾದರ್, ಆಯುರ್ವೇದ ತಜ್ಞರು ಮೊ.ನಂ.9845199790

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin