ಸಂಪತ್‍ರಾಜ್‍ಗೆ ಮೇಯರ್ ಸ್ಥಾನ ನೀಡಲು ಸಿಎಂಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Sampat-Raj--01

ಬೆಂಗಳೂರು, ಸೆ.25- ದೇವರ ಜೀವನಹಳ್ಳಿ ವಾರ್ಡ್‍ನ ಬಿಬಿಎಂಪಿ ಸದಸ್ಯ ಸಂಪತ್‍ರಾಜ್‍ಗೆ ಮೇಯರ್ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಹಿತರಕ್ಷಣಾ ಒಕ್ಕೂಟದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಕಳೆದ ಎರಡು ದಶಕಗಳಿಂದ ಈ ಭಾಗದ ಯಾವೊಬ್ಬ ಪಾಲಿಕೆ ಸದಸ್ಯರಿಗೂ ಮೇಯರ್ ಸ್ಥಾನ ಲಭಿಸಿಲ್ಲ. ದಂಡು ಪ್ರದೇಶದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕನ್ನಡ ಅಭಿಮಾನಿಯಾಗಿ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಸಂಪತ್‍ರಾಜ್ ಅವರಿಗೆ ಮೇಯರ್ ಸ್ಥಾನ ನೀಡಿದರೆ ಅಸಮಾನತೆಯ ಕೂಗು ಬಗೆಹರಿಯುತ್ತದೆ ಎಂದು ಒಕ್ಕೂಟದ ಪರವಾಗಿ ಜನಪರ ಚಿಂತಕ ತಲಕಾಡು ಚಿಕ್ಕರಂಗೇಗೌಡ ಸಿಎಂ ಬಳಿ ಮನವಿ ಮಾಡಿಕೊಂಡರು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಶಾಸಕರ ಅಭಿಪ್ರಾಯ ಪಡೆಯುತ್ತೇನೆ. ಸಂಪತ್‍ರಾಜ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಎಲ್ಲರ ಸಲಹೆ ಪಡೆದು ಸೂಕ್ತರನ್ನು ಮೇಯರ್ ಸ್ಥಾನಕ್ಕೆ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು. ನಿಯೋಗದಲ್ಲಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹಮ್ಮದ್ ಖುರೇಷಿ, ಬೆಂಗಳೂರು ಕನ್ನಡಿಗರ ಸಂಘದ ಅಧ್ಯಕ್ಷ ಬಿ.ವಿ.ನರಸಿಂಹಯ್ಯ ಸೇರಿದಂತೆ ಹಲವರು ಇದ್ದರು.

Facebook Comments

Sri Raghav

Admin