ಸಂಪ್‍ನಲ್ಲಿ ಬಾಲಕನ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

death--baby

ಮೈಸೂರು, ನ.12- ನಾಪತ್ತೆಯಾಗಿದ್ದ ಬಾಲಕ ಸಂಪಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೈಸೂರಿನ ಹೊರವಲಯದ ರಮಾಬಾಯಿ ನಗರದ ನಾಗಮ್ಮ ಎಂಬುವರ ಪುತ್ರ ಸುಭಾಷ್ (4) ಮೃತ ಬಾಲಕ. ಈತ ಮನೆ ಬಳಿಯ ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಆಟವಾಡುವಾಗ ತೆರೆದ ಸಂಪಿಗೆ ಬಿದ್ದಿದ್ದಾನೆ.ನಿನ್ನೆ ಮಧ್ಯಾಹ್ನದಿಂದ ಆಟವಾಡಲು ಹೋದ ಬಾಲಕ ನಾಪತ್ತೆಯಾಗಿದ್ದನು. ಇಂದು ಬೆಳಗ್ಗೆ ಸಂಪ್‍ನಲ್ಲಿ ಆತನ ಶವ ಪತ್ತೆಯಾಗಿದೆ.ಈ ಸಂಬಂಧ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

mysr2

mysr3

► Follow us on –  Facebook / Twitter  / Google+

Facebook Comments

Sri Raghav

Admin