ಸಂಭ್ರಮದ ಲಕ್ಷ್ಮೀ ಪೂಜೆ ಮಾಡಿದ ಖ್ಯಾತ ಹಾಲಿವುಡ್ ನಟಿ ಮಿಲೆ ಸೈರಸ್

ಈ ಸುದ್ದಿಯನ್ನು ಶೇರ್ ಮಾಡಿ

Miley-Cyrus

ಲಾಸ್ ಏಂಜೆಲಿಸ್, ಫೆ.7-ಹಾಲಿವುಡ್ ಖ್ಯಾತ ನಟಿ ಮತ್ತು ಗಾಯಕಿ ಮಿಲೆ ಸೈರಸ್ ತಮ್ಮ ಮನೆಯಲ್ಲಿ ಸಡಗರ-ಸಂಭ್ರಮದಿಂದ ಲಕ್ಷ್ಮೀ ಪೂಜೆ ಆಚರಿಸಿ ಗಮನಸೆಳೆದಿದ್ದಾರೆ.
26ರ ಹರೆಯದ ನಟಿ ಲಕ್ಷ್ಮೀಪೂಜೆಯನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸಿದ ಬಗ್ಗೆ ನಿನ್ನೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಟೋ ಹಾಕಿದ್ದಾರೆ.    ಲಕ್ಷ್ಮೀ ಪೂಜೆಗಾಗಿ ಹೂವು, ಹಣ್ಣು, ಸಿಹಿ ತಿಂಡಿಗಳು, ಅಗರಬತ್ತಿ, ದೀಪ ಮತ್ತಿತ್ತರ ವಸ್ತುಗಳನ್ನು ಬಳಿಸಿದ ದೃಶ್ಯಗಳು ಕಂಡುಬಂದಿವೆ.
ಲಿಂಡ್ಸೆ ಲೋಹನ್ ಕುರಾನ್ ಪಠಣ :
ನಟಿ ಮಿಲೆ ಸೈರಸ್ ಲಕ್ಷ್ಮೀ ಪೂಜೆ ಮಾಡಿ ಗಮನ ಸೆಳೆದಿದ್ದರೆ, ಮತ್ತೊಬ್ಬ ಹಾಲಿವುಡ್ ತಾರೆ ಲಿಂಡ್ಸೆ ಲೋಹನ್ ಜಿದ್ದಾದಲ್ಲಿ ನಡೆದ ಸಿವಾರ್ ಶೋಯೆಬ್ ಎಂಬ ಅರೆಬಿಕ್ ಟಿವಿ ಟಾಕ್ ಶೋನಲ್ಲಿ ಭಾಗವಹಿಸಿ ಇಸ್ಲಾಂ ಧರ್ಮದ ಬಗ್ಗೆ ತಮಗಿರುವ ಆಸಕ್ತಿಯನ್ನು ಪ್ರದರ್ಶಿಸಿದ್ದಾರೆ.   ಕುರಾನ್ ಪಠಿಸುವುದರಿಂದ ನನ್ನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದು ಲಿಂಡ್ಸೆ ಈ ಕಾರ್ಯಕ್ರಮದಲ್ಲಿ ತಿಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin