ಸಂಯುಕ್ತ ರಾಷ್ಟ್ರದ 71ನೇ ಅಧಿವೇಶನದಲ್ಲಿ ಪಾಕ್ ವಿರುದ್ಧ ದನಿಯೆತ್ತಲಿದ್ದಾರೆ ಸುಷ್ಮಾ

ಈ ಸುದ್ದಿಯನ್ನು ಶೇರ್ ಮಾಡಿ

ISI

ನ್ಯೂಯಾರ್ಕ್,ಸೆ.19- ಇಂದಿನಿಂದ ನಡೆಯಲಿರುವ ಸಂಯುಕ್ತ ರಾಷ್ಟ್ರದ 71ನೇ ಅಧಿವೇಶನದಲ್ಲಿ ಪಾಕ್ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುಡುಗಲಿದ್ದಾರೆ.

ಕಾಶ್ಮೀರ ಪ್ರಕರಣ ಪ್ರಮುಖ?:
ಈ ಅಧಿವೇಶನದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದಿಲ್ಲ ಎನ್ನಲಾಗಿದೆ. ಪ್ರಧಾನಿ ಮೋದಿ ಬದಲು ಭಾರತದ ಪ್ರತಿನಿಧಿ ಮಂಡಲವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೆ.26ರಂದು ಪಾಲ್ಗೊಳ್ಳಲಿದ್ದಾರೆ. ಸೆ.21ರಂದು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಈ ಅಧಿವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಅಧಿವೇಶನದಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಕಾಶ್ಮೀರ ದಾಳಿಯೇ ಪ್ರಮುಖವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಪ್ರಕರಣ ಸಂಬಂಧ ಎರಡು ದೇಶಗಳ ನಡುವೆ ವಾಗ್ವಾದ ನಡೆಯುವ ಸಾಧ್ಯತೆಯಿದೆ. ಇನ್ನು ಉಭಯ ದೇಶಗಳು ಬಲೂಚಿಸ್ತಾನದ ಸ್ವಾತಂತ್ರ್ಯದ ಬಗ್ಗೆಯೂ ಮಾತನಾಡಲಿವೆ ಎಂದು ತಿಳಿದು ಬಂದಿದೆ.

ಸಿರಿಯಾ ಮೇಲೆ ಚರ್ಚೆ:
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಐಸಿಸ್ ಉಗ್ರರ ಮೇಲೆ ವಾಗ್ದಾಳಿ ನಡೆಸಲಿದ್ದಾರೆ. ಈ ಅಧಿವೇಶನದಲ್ಲಿ ಅವರ ಮಟ್ಟ ಹಾಕುವುದಕ್ಕೆ ಅಂತಾರಾಷ್ಟ್ರೀಯ ಸಹಾಯ ಕೋರಿ ಮನವಿಯೂ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಈ ನಾಯಕರಿಗೆ ಅಂತಿಮ ಅಧಿವೇಶನ:
ಸಂಯುಕ್ತ ರಾಷ್ಟ್ರದ ಪ್ರಧಾನ ಕಾರ್ಯದರ್ಶಿಯಾದ ಬಾನ್ ಕಿ ಮೂನ್ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಇದು ಅಂತಿಮ ಅಧಿವೇಶನವಾಗಿದೆ. ಈ ದಿಗ್ಗಜರ ಕಾರ್ಯಾವಧಿ ಮುಂದಿನ ವರ್ಷ ಜನವರಿಗೆ ಮುಗಿಯಲಿದೆ.

ವಿಶ್ವದ ಮಹಾನ್ ನಾಯಕರು ಭಾಗಿ:
ಸಂಯುಕ್ತ ರಾಷ್ಟ್ರದ 71ನೇ ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದ್ದು, ವಾರದವರೆಗೆ ನಡೆಯಲಿದೆ. ಸೆ.20ರಿಂದ 26ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ವಿಶ್ವದ ಮಹಾನ್ ನಾಯಕರು ಪಾಲ್ಗೊಳ್ಳಲಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin