ಸಂವಿಧಾನಿಕ ಮೌಲ್ಯಗಳ ರಕ್ಷಣೆಗೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

CHIKKAMANGALURU

ಚಿಕ್ಕಮಗಳೂರು ಸೆ.2- ದೇಶದಲ್ಲಿ ಕೋಮು ಧುೃವೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತೀಯ ಸಮಾಜದ ಬಹುತ್ವದ ಸ್ವಭಾವ ಮತ್ತು ಸಂವಿಧಾನಿಕ ಮೌಲ್ಯಗಳ ರಕ್ಷಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಮಾಅತೆ-ಇಸ್ಲಾಮಿಹಿಂದ್ ನೇತೃತ್ವದ ನಿಯೋಗ ಆಗ್ರಹಿಸಿದೆ. ಜೆಐಎಚ್ ನೇತೃತ್ವದಲ್ಲಿ ಶಾಂತಿ ಮತ್ತು ಮಾನವೀಯತೆ ರಾಷ್ಟ್ರವ್ಯಾಪಿ ಅಭಿಯಾನದ ಅಂಗವಾಗಿ ವಿವಿಧ ಸಂಘಸಂಸ್ಥೆ ಪ್ರತಿನಿಧಿಗಳನ್ನೊಳಗೊಂಡ ತಂಡ ಅಪರಜಿಲ್ಲಾಧಿಕಾರಿ ವೈಶಾಲಿ ಅವರ ಮೂಲಕ ರಾಜ್ಯಪಾಲರು ಹಾಗು ರಾಷ್ಟ್ರಪತಿಗಳಿಗೆ ಲಿಖಿತ ಮನವಿ ಸಲ್ಲಿಸಿತು.

ಜೆಐಎಚ್ ನಗರ ಅಧ್ಯಕ್ಷ ರಿಜ್ವಾನಖಾಲೀದ್, ಮಾಜಿಅಧ್ಯಕ್ಷ ಡಾ.ಮಹಮ್ಮದ್‍ಸ್ಹಾಲಿ, ಅಭಿಯಾನದ ಸಂಚಾಲಕ ಆರ್.ಗಫಾರ್‍ಬೇಗ್, ಬಿ.ಎಸ್.ಪಿ.ಜಿಲ್ಲಾಧ್ಯಕ್ಷ ರಾಧಾಕೃಷ್ಣ, ಜಿಲ್ಲಾಒಕ್ಕಲಿಗರ ಸಂಘದ ನಿರ್ದೇಶಕ ಕುಳ್ಳೇಗೌಡ, ನಿವೃತ್ತಪ್ರಾಂಶುಪಾಲ ವಾಸು, ಆಜಂಮಸೀದಿ ಮೌಲಾನ ಔರಂಗಜೇಬ್, ಮಕ್ಕಾಮಸೀದಿ ಮೌಲ್ವಿ ಆಶ್ರಫ್‍ಆಲಿ, ರಾಮನಹಳ್ಳಿ ಮೌಲ್ವಿ ಅಬ್ದುಲ್‍ರವೂಫ್ ಮತ್ತಿತರರು ನಿಯೋಗದಲ್ಲಿದ್ದರು.

ಅಂತರ್ಜಾಲದಲ್ಲಿ ಕೋಮುಭಾವನೆ ಪ್ರಚೋದಿಸುವ, ನಿಂದನೀಯ ಮತ್ತು ವಿಷಕಾರಿ ವಿಷಯಗಳು ಪ್ರಸಾರವಾಗದಂತೆ ನಿಗಾವಹಿಸಬೇಕು. ತಪ್ಪಿತಸ್ಥರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಕಠಿಣಕ್ರಮ ಜರುಗಿಸುವಂತಾಗಬೇಕು ಎಂದು ಒತ್ತಾಯಿಸಿರುವ ಜೆ.ಐ.ಎಚ್., ಪರಿಸ್ಥಿತಿಯನ್ನು ಉತ್ತಮಪಡಿಸಲು ಭಾರತದ ಸಂವಿಧಾನದ ರಕ್ಷಕರೆಂಬ ನೆಲೆಯಲ್ಲಿ ರಾಷ್ಟ್ರಪತಿಗಳು ತುರ್ತಾಗಿ ಮಧ್ಯಪ್ರವೇಶಿಸಿ ಭಾರತದ ಪೌರರ ಮೂಲಭೂತ ಹಕ್ಕುಗಳ ರಕ್ಷಣೆಯ ಸಾಂವಿಧಾನಿಕ ಹೊಣೆಗಾರಿಕೆಯನ್ನು ಯಾವುದೇ ತಾರತಮ್ಯವಿಲ್ಲದೆ ನಿರ್ವಹಿಸಲು ಭಾರತ ಸರ್ಕಾರವನ್ನು ನಿರ್ಬಂಧಿಸುವಂತೆ ವಿನಂತಿಸಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin