ಸಂವೃದ್ಧ ಮಳೆಗಾಗಿ ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

kaduru--padayatre

ಕಡೂರು, ಆ.29- ಸಂವೃದ್ಧ ಮಳೆ ಮತ್ತು ಶನಿದೋಷ ನಿವಾರಣೆಗಾಗಿ ತಾಲೂಕಿನ ಆಂಜನೇಯಸ್ವಾಮಿ ನೂರಾರು ಭಕ್ತರು ಪಟ್ಟಣದಲ್ಲಿ ಯಳನಡು ಮಠದ ಶ್ರೀ ಜನಪ್ರಭು   ಸಿದ್ಧರಾಮ ದೇಶೀಕೇಂದ್ರ ಸ್ವಾಮಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆಸಿದರು.ಶ್ರೀಮಾರುತಿ ಸೇವಾ ಸಂಘದ ಆಶ್ರಯದಲ್ಲಿ ನಡೆದ ಈ ಪಾದಯಾತ್ರೆ ಪಟ್ಟಣದ ಕನಕವೃತ್ತದಲ್ಲಿರುವ ಶ್ರೀ ಗಾಣದಾಳು ನಿರ್ವಾಣಸ್ವಾಮಿ ಅಜ್ಜಯ್ಯನವರ ದೇವಸ್ಥಾನದಲ್ಲಿ ಪೂಜಿಸಿ, ಪ್ರಾರ್ಥಿಸಿ ನಂತರ ಮೆರವಣಿಗೆ ಹೊರಟಿತು.

ಪಾದಯಾತ್ರೆಯಲ್ಲಿ ಬಳ್ಳೇಕೆರೆ ಆಂಜನೇಯಸ್ವಾಮಿ ಉತ್ಸವಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಪಾದಯಾತ್ರೆ ಸಾಗಿಬಂದ ದಾರಿಯಲ್ಲಿ ಮಧ್ಯೆ-ಮಧ್ಯೆ ಕಂಡುಬಂದ ದೇವಾಲಯಗಳಲ್ಲಿ ಭಕ್ತರು ಪೂಜಿಸಿ ಪಾದಯಾತ್ರೆಯನ್ನು ಮುಂದುವರೆಸಿದರು.ಮೆರವಣಿಗೆಯ ದಿವ್ಯ ಸಾನಿಧ್ಯವನ್ನು ಯಳನಡು ಮಠದ ಶ್ರೀ ಸಂವೃದ್ಧ ಮಳೆಗಾಗಿ ಪಾದಯಾತ್ರೆ  ಸಿದ್ಧರಾಮ ದೇಶೀಕೇಂದ್ರ ಸ್ವಾಮಿ ವಹಿಸಿದ್ದು ಅವರೂ ಕೂಡ ಪಾದಯಾತ್ರೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು, ಮುಖಂಡರಾದ ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ಜಿಲ್ಲಾ ಪಂಚಾಯಿ ಮಾಜಿ ಅಧ್ಯಕ್ಷರಾದ ಬೆಳ್ಳಿಪ್ರಕಾಶ್, ಕೆ.ಎಂ. ಕೆಂಪರಾಜು, ಸದಸ್ಯ ಶರತ್ ಕೃಷ್ಣಮೂರ್ತಿ, ಮಹಾವೀರ್ ಸುರಾನ ಮುಂತಾದ ಮುಖಂಡರುಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ವಿವಿಧ ಸಮಾಜಗಳ ಮತ್ತು ಸಂಘ-ಸಂಸ್ಥೆಗಳ ಜನರು, ಮಹಿಳೆಯರು, ಯುವಕರು, ಪಾದಯಾತ್ರೆಯಲ್ಲಿ ಪಾಲ್ಗೊಂಡು ಭಗವಧ್ವಜ ಹಿಡಿದು ಕುಣಿದು ಕುಪ್ಪಳಿಸುತ್ತ ಶ್ರೀ ಸ್ವಾಮಿಗೆ ಜಯಕಾರ ಹಾಕುತ್ತಾ, ದಾರಿಯದ್ದಕ್ಕೂ ಕರ್ಪೂರವನ್ನು ಹಚ್ಚುತ್ತಾ ಸಾಗಿದರೆ ರಸ್ತೆಯ ಇಕ್ಕೆಲಗಳಲ್ಲಿ ನಾಗರಿಕರು ಕುತೂಹಲದಿಂದ ವೀಕ್ಷಿಸುತ್ತಿದ್ದರು.ಪಟ್ಟಣದಿಂದ ಒಟ್ಟು 8 ಕಿ.ಮೀ. ಉದ್ದದ ಈ ಪಾದಯಾತ್ರೆ ಪಟ್ಟಣದ ಕೆ.ಎಂ. ರಸ್ತೆ, ಟಿ.ಬಿ. ರಸ್ತೆ, ಜೈನ್ ದೇವಾಲಯದ ರಸ್ತೆ, ಕೆಎಲ್‍ವಿ ವೃತ್ತ ಹಾಯ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ನಂತರ ಬಳ್ಳೇಕೆರೆ ಆಂಜನೇಯ ಸ್ವಾಮಿ ದೇವಾಲಯನ್ನು ರಾತ್ರಿ ತಲುಪಿತು.

 

► Follow us on –  Facebook / Twitter  / Google+

Facebook Comments

Sri Raghav

Admin