ಸಂಸತ್ತಿನಲ್ಲಿ 12ನೇ ದಿನವೂ ನಡೆಯದ ಕಲಾಪ

ಈ ಸುದ್ದಿಯನ್ನು ಶೇರ್ ಮಾಡಿ

Session-Parliament

ನವದೆಹಲಿ, ಡಿ.2-ನೋಟು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 12ನೇ ದಿನವಾದ ಇಂದೂ ಕೂಡ ಪ್ರತಿಪಕ್ಷಗಳಿಂದ ಭಾರೀ ಪ್ರತಿಭಟನೆ ಮತ್ತು ಧರಣಿ ಮುಂದುವರೆಯಿತು. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸದನದಲ್ಲಿ ಉತ್ತರ ನೀಡಬೇಕು ಹಾಗೂ ತಮ್ಮನ್ನು ಕಾಳಧನಿಕರ ಬೆಂಬಲಿಗರು ಎಂದು ಹೇಳಿಕೆ ನೀಡಿರುವುದಕ್ಕೆ ಕ್ಷಮೆ ಬಿಗಿಪಟ್ಟು ಹಿಡಿದ ಕಾರಣ ಕೋಲಾಹಲದ ವಾತಾವರಣ ಉಂಟಾಗಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಮುಂದೂಡಲಾಯಿತು.

ಉಭಯ ಸದನಗಳಲ್ಲಿ ಪ್ರಶ್ನೋತ್ತರ ಕಲಾಪ ಆರಂಭ ವಾಗುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಸದಸ್ಯರು ಯಥಾಪ್ರಕಾರ ನೋಟು ರದ್ದತಿ ವಿಷಯವನ್ನು ಪ್ರಸ್ತಾಪಿಸಿದರು. ಜೊತೆಗೆ ದೇಶದ ಹಲವೆಡೆ ಟೋಲ್‍ಗಳಲ್ಲಿ ಸೇನೆಯನ್ನು ನಿಯೋಜಿಸಿರುವ ವಿಷಯವೂ ಪ್ರಸ್ತಾಪವಾಗಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸುಗಮ ಕಲಾಪ ನಡೆಯಲು ಅವಕಾಶ ನೀಡುವಂತೆ ಮನವಿ ಮಾಡಿದರೂ ಗದ್ದಲ-ಕೋಲಾಹಲಗಳು ತೀವ್ರಗೊಂಡ ಕಾರಣ ಉಭಯ ಸದನಗಳ ಕಲಾಪಗಳನ್ನು ನಾಳೆಗೆ ಮುಂದೂಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin