ಸಂಸತ್ತಿನ ಉಭಯಸದನಗಳಲ್ಲಿ ಕೋಲಾಹಲ, ನಡೆಯದ ಕಲಾಪ

ಈ ಸುದ್ದಿಯನ್ನು ಶೇರ್ ಮಾಡಿ

Rajya-sabha

ನವದೆಹಲಿ, 26- ದೇಶದೆಲ್ಲೆಡೆ ಹೆಚ್ಚುತ್ತಿರುವ ಸ್ವಘೋಷಿತ ಗೋರಕ್ಷಕರ ಹಿಂಸಾಚಾರ, ರೈತರ ಸಮಸ್ಯೆ, ಐವರು ಕಾಂಗ್ರೆಸ್ ಸದಸ್ಯರ ಅಮಾನತು, ನೂತನ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ರಾಷ್ಟ್ರದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರನ್ನು ಹೆಸರಿಸದಿರುವುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ವಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಸಂಸತ್ತಿನ ಉಭಯಸದನಗಳಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿ ಕಲಾಪಗಳು ನಡೆಯದೆ ಮುಂದೂಡಬೇಕಾಯಿತು.

ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಐವರು ಕಾಂಗ್ರೆಸ್ ಸಂಸದರ ಅಮಾನತು ಮಾಡಿದ್ದನ್ನು ಖಂಡಿಸಿ ಮತ್ತು ನೂತನ ರಾಷ್ಟ್ರಪತಿ ಕೋವಿಂದ್ ಅವರು ನಿನ್ನೆ ಮಾತನಾಡುವಾಗ ದೇಶದ ಮೊದಲ ಪ್ರಧಾನಿ ನೆಹರೂ ಹೆಸರು ಪ್ರಸ್ತಾಪಿಸದೆ ಬೇರೆಯವರ ಹೆಸರುಗಳನ್ನು ಹೇಳಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿ ಧರಣಿ ನಡೆಸಿದರು. ಪ್ರಶ್ನೋತ್ತರ ವೇಳೆಯಲ್ಲಿ ರೈತರ ಸಮಸ್ಯೆ ಮತ್ತು ಗೋರಕ್ಷಕರ ಹಿಂಸಾಚಾರಗಳ ಬಗ್ಗೆ ಚರ್ಚಿಸುವಂತೆ ಎಂದು ವಿಪಕ್ಷಗಳ ಸದಸ್ಯರು ಒತ್ತಾಯಿಸಿದರು. ಆದರೆ ಸ್ಪೀಕರ್ ವಿಪಕ್ಷಗಳ ಈ ಮನವಿಯನ್ನು ತಿರಸ್ಕರಿಸಿದರು. ಆಗ ಸದಸ್ಯರು ಬಂದ್ ಕರೋ ಬಂದ್ ಕರೋ ಎಂದು ಘೋಷಣೆ ಕೂಗಿದರು. ಇದೇ ವೇಳೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಪಿಪಿಪಿ ಮಾದರಿಯಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿಗೆ ನಿರ್ಧರಿಸಿರುವುದಾಗಿ ಸದನಕ್ಕೆ ಮಾಹಿತಿ ನೀಡಿದರು.

ಈ ಮಧ್ಯೆ ಇರಾಕ್‍ನಲ್ಲಿ ಕಾಣೆಯಾಗಿರುವ 39 ಮಂದಿ ಭಾರತೀಯರ ಬಗ್ಗೆ ಪ್ರಸ್ತಾಪವಾದಾಗ, ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ಬಗ್ಗೆ ಜನಗಳಿಗೆ ತಮ್ಮು ಮಾಹಿತಿ ಹೋಗುವುದು ಬೇಡ. ಈ ಕುರಿತಂತೆ ಸದನದಲ್ಲಿ ವಿವರಣೆ ನೀಡುತ್ತೇನೆ. ನೀವೆಲ್ಲ ನಿಮ್ಮ ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದರು. ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸದನಕ್ಕೆ ತಿಳಿಸಿದರು. ಆದರೆ ಸದಸ್ಯರು ಗದ್ದಲ ಮುಂದುವರಿಸಿದರು. ಆ ಗದ್ದಲದಲ್ಲೇ ಸುಷ್ಮಾ ಉತ್ತರ ನೀಡಿದ್ದು ಯಾರಿಗೂ ಕೇಳಿಸಲೇ ಇಲ್ಲ.

ಆಗ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ, ಗೋರಕ್ಷಕರು ನಡೆಸುತ್ತಿರುವ ಹಿಂಸಾಚಾರ ಹಾಗೂ ರೈತರ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಅದಕ್ಕೆ ಅವಕಾಶ ಮಾಡಿಕೊಡಿ ಎಂದರು. ಈ ಸಂದರ್ಭ ಉಂಟಾದ ಗದ್ದಲದಿಂದಾಗಿ ಕಲಾಪವನ್ನು ಪದೇ ಪದೇ ಮುಂದೂಡಬೇಕಾಯಿತು. ರಾಜ್ಯಸಭೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಅಲ್ಲಿಯೂ ಇದೇ ಗದ್ದಲ, ಇದೇ ಕೋಲಾಹಲ ನಡೆದವು. ಆಗ ಸಭಾಪತಿಗಳು ಸದನವನ್ನು ಮಧ್ಯಾಹ್ನದ ವರೆಗೆ ಮುಂದೂಡಿದರು. ನಿನ್ನೆ ತಾವು ಸದನ ನಡೆಯುತ್ತಿದ್ದಾಗ ಮೊಬೈಲ್ ಬಳಸಿದ್ದಕ್ಕೆ ಸಂಸದ ಅನುರಾಗ್ ಠಾಕೂರ್ ವಿಷಾದ ವ್ಯಕ್ತಪಡಿಸಿದರು. ಇಂತಹ ಪ್ರಕರಣಗಳು ಸದನದಲ್ಲಿ ಪುನರಾವರ್ತನೆಯಾಗಬಾರದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಎಚ್ಚರಿಕೆ ನೀಡಿದರು.- ದೇಶದೆಲ್ಲೆಡೆ ಹೆಚ್ಚುತ್ತಿರುವ ಸ್ವಘೋಷಿತ ಗೋರಕ್ಷಕರ ಹಿಂಸಾಚಾರ, ರೈತರ ಸಮಸ್ಯೆ, ಐವರು ಕಾಂಗ್ರೆಸ್ ಸದಸ್ಯರ ಅಮಾನತು, ನೂತನ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ರಾಷ್ಟ್ರದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರನ್ನು ಹೆಸರಿಸದಿರುವುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ವಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಸಂಸತ್ತಿನ ಉಭಯಸದನಗಳಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿ ಕಲಾಪಗಳು ನಡೆಯದೆ ಮುಂದೂಡಬೇಕಾಯಿತು.
ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಐವರು ಕಾಂಗ್ರೆಸ್ ಸಂಸದರ ಅಮಾನತು ಮಾಡಿದ್ದನ್ನು ಖಂಡಿಸಿ ಮತ್ತು ನೂತನ ರಾಷ್ಟ್ರಪತಿ ಕೋವಿಂದ್ ಅವರು ನಿನ್ನೆ ಮಾತನಾಡುವಾಗ ದೇಶದ ಮೊದಲ ಪ್ರಧಾನಿ ನೆಹರೂ ಹೆಸರು ಪ್ರಸ್ತಾಪಿಸದೆ ಬೇರೆಯವರ ಹೆಸರುಗಳನ್ನು ಹೇಳಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿ ಧರಣಿ ನಡೆಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ರೈತರ ಸಮಸ್ಯೆ ಮತ್ತು ಗೋರಕ್ಷಕರ ಹಿಂಸಾಚಾರಗಳ ಬಗ್ಗೆ ಚರ್ಚಿಸುವಂತೆ ಎಂದು ವಿಪಕ್ಷಗಳ ಸದಸ್ಯರು ಒತ್ತಾಯಿಸಿದರು. ಆದರೆ ಸ್ಪೀಕರ್ ವಿಪಕ್ಷಗಳ ಈ ಮನವಿಯನ್ನು ತಿರಸ್ಕರಿಸಿದರು. ಆಗ ಸದಸ್ಯರು ಬಂದ್ ಕರೋ ಬಂದ್ ಕರೋ ಎಂದು ಘೋಷಣೆ ಕೂಗಿದರು. ಇದೇ ವೇಳೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಪಿಪಿಪಿ ಮಾದರಿಯಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿಗೆ ನಿರ್ಧರಿಸಿರುವುದಾಗಿ ಸದನಕ್ಕೆ ಮಾಹಿತಿ ನೀಡಿದರು.
ಈ ಮಧ್ಯೆ ಇರಾಕ್‍ನಲ್ಲಿ ಕಾಣೆಯಾಗಿರುವ 39 ಮಂದಿ ಭಾರತೀಯರ ಬಗ್ಗೆ ಪ್ರಸ್ತಾಪವಾದಾಗ, ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ಬಗ್ಗೆ ಜನಗಳಿಗೆ ತಮ್ಮು ಮಾಹಿತಿ ಹೋಗುವುದು ಬೇಡ. ಈ ಕುರಿತಂತೆ ಸದನದಲ್ಲಿ ವಿವರಣೆ ನೀಡುತ್ತೇನೆ. ನೀವೆಲ್ಲ ನಿಮ್ಮ ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದರು. ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸದನಕ್ಕೆ ತಿಳಿಸಿದರು. ಆದರೆ ಸದಸ್ಯರು ಗದ್ದಲ ಮುಂದುವರಿಸಿದರು. ಆ ಗದ್ದಲದಲ್ಲೇ ಸುಷ್ಮಾ ಉತ್ತರ ನೀಡಿದ್ದು ಯಾರಿಗೂ ಕೇಳಿಸಲೇ ಇಲ್ಲ.

ಆಗ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ, ಗೋರಕ್ಷಕರು ನಡೆಸುತ್ತಿರುವ ಹಿಂಸಾಚಾರ ಹಾಗೂ ರೈತರ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಅದಕ್ಕೆ ಅವಕಾಶ ಮಾಡಿಕೊಡಿ ಎಂದರು. ಈ ಸಂದರ್ಭ ಉಂಟಾದ ಗದ್ದಲದಿಂದಾಗಿ ಕಲಾಪವನ್ನು ಪದೇ ಪದೇ ಮುಂದೂಡಬೇಕಾಯಿತು.
ರಾಜ್ಯಸಭೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಅಲ್ಲಿಯೂ ಇದೇ ಗದ್ದಲ, ಇದೇ ಕೋಲಾಹಲ ನಡೆದವು. ಆಗ ಸಭಾಪತಿಗಳು ಸದನವನ್ನು ಮಧ್ಯಾಹ್ನದ ವರೆಗೆ ಮುಂದೂಡಿದರು. ನಿನ್ನೆ ತಾವು ಸದನ ನಡೆಯುತ್ತಿದ್ದಾಗ ಮೊಬೈಲ್ ಬಳಸಿದ್ದಕ್ಕೆ ಸಂಸದ ಅನುರಾಗ್ ಠಾಕೂರ್ ವಿಷಾದ ವ್ಯಕ್ತಪಡಿಸಿದರು. ಇಂತಹ ಪ್ರಕರಣಗಳು ಸದನದಲ್ಲಿ ಪುನರಾವರ್ತನೆಯಾಗಬಾರದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಎಚ್ಚರಿಕೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin