ಸಂಸತ್ತಿನ ಒಂದು ತಿಂಗಳ ಕಲಾಪ ನುಂಗಿದ ನೋಟಿನ ಗದ್ದಲ

ಈ ಸುದ್ದಿಯನ್ನು ಶೇರ್ ಮಾಡಿ

Session-Parliament

ನವದೆಹಲಿ, ಡಿ.15- ನೋಟು ರದ್ದತಿ ಪ್ರತಿಭಟಿಸಿ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ವಿರೋಧಪಕ್ಷಗಳ ಪ್ರತಿಭಟನೆ, ಧರಣಿ ಕೊನೆ ದಿನವಾದ ಇಂದೂ ಕೂಡ ಉಗ್ರ ಸ್ವರೂಪ ಪಡೆಯಿತು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಎಂದಿನಂತೆ ಆರೋಪ- ಪ್ರತ್ಯಾರೋಪಗಳೊಂದಿಗೆ ಭಾರೀ ವಾದ-ವಾಗ್ವಾದಕ್ಕೆ ಸಾಕ್ಷಿಯಾಯಿತು. ಗದ್ದಲ- ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.  ಇದರೊಂದಿಗೆ ನೋಟು ಬ್ಯಾನ್ ಗದ್ದಲವು 241ನೇ ಅಧಿವೇಶನದ ಒಂದು ತಿಂಗಳ ಕಲಾಪವನ್ನು ಆಪೋಶನ ತೆಗೆದುಕೊಂಡಿತು.

ಲೋಕಸಭೆ ಸಮಾವೇಶ ಗೊಳ್ಳುತ್ತಿದ್ದಂತೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು ನೋಟು ರದ್ದತಿ ವಿಷಯ ಪ್ರಸ್ತಾಪಿಸಿ ಘೋಷಣೆಗಳು ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಇಂದೂ ಕೂಡ ಅಗಸ್ಟ ವೆಸ್ಟ್‍ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಕಾಂಗ್ರೆಸ್ ಲಂಚ ಹಗರಣವನ್ನು ಪ್ರಸ್ತಾಪಿಸಿ ವಾದಕ್ಕಿಳಿದರು.  ಆಗ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವೆ ಪರಸ್ಪರ ಆರೋಪ- ಪ್ರತ್ಯಾರೋಪಗಳೊಂದಿಗೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷರಾದ ಸುಮಿತ್ರಾ ಮಹಾಜನ್ ಎರಡೂ ಬಣಗಳನ್ನೂ ಸಮಾಧಾನಪಡಿಸಲು ಯತ್ನಿಸಿದರು.

ಪ್ರತಿಭಟನೆ, ಗದ್ದಲಗಳ ನಡುವೆ ಕೋಲಾಹಲ ಮುಂದುವರಿದ ಕಾರಣ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮತೆ ಕಲಾಪ ಸಮಾವೇಶಗೊಂಡಾಗಲೂ ಇದೇ ಪರಿಸ್ಥಿತಿ ಮುಂದುವರಿದಾಗ ಮಹಾಜನ್ ಸದನವನ್ನು ಪುನ: ಮುಂದೂಡಿದರು.
ಅನಿರ್ದಿಷ್ಟಾವಧಿ ಮುಂದೂಡಿಕೆ:

ರಾಜ್ಯಸಭೆ ಸಮಾ ವೇಶಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ನೋಟು ರದ್ದತಿ ವಿರುದ್ಧ ಘೋಷಣೆಗಳು ಕೂಗಿದರು. ಕೃಷಿ ಸಾಲ ಮನ್ನಾ ಮಾಡುವಂತೆ ಪಟ್ಟು ಹಿಡಿದರು. ಇನ್ನೊಂದೆಡೆ ಬಿಜೆಪಿ ಸದಸ್ಯರು ಅಗಸ್ಟ ವೆಸ್ಟ್‍ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಹಿಂದಿನ ಯುಪಿಎ ಸರ್ಕಾರದ ಹಗರಣವನ್ನು ಪ್ರಸ್ತಾಪಿಸದರು.   ಈ ವಿಷಯಗಳ ಕುರಿತು ಪರಸ್ಪರ ವಾದ-ವಾಗ್ವಾದ ನಡೆದು ಸದನದಲ್ಲಿ ಗದ್ದಲ ಮುಂದುವರಿದು ಸಭಾಪತಿ ಹಮೀದ್ ಅನ್ಸಾರಿ ತೀವ್ರ ಬೇಸರ ವ್ಯಕ್ತಪಡಿಸಿದರು.  ನಂತರ 241ನೇ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin